ರಾಣೆಬೆನ್ನೂರ

ವಿಕಲಚೇತನರು ಸಮಾನತೆಯಿಂದ ಬದುಕಬೇಕು: ಉದಯಕುಮಾರ

ವಿಕಲಚೇತನರು ಸಮಾನತೆಯಿಂದ ಬದುಕಬೇಕು: ಉದಯಕುಮಾರ

ಲೋಕದರ್ಶನ ವರದಿ 

ರಾಣೇಬೆನ್ನೂರು 17: ವಿಕಲಚೇತನರು ಸಮಾಜದಲ್ಲಿ ಇತರರಂತೆ ಸಮಾನತೆಯಿಂದ ತಮ್ಮ ಬದುಕನ್ನು ಸಾಗಿಸಬೇಕು ಅದಕ್ಕೆ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಾಯ ಸಹಕಾರ ದೂರೆಯಬೇಕಾದ ಅಗತ್ಯವಿದೆ ಎಂದು ನಗರಸಭೆ ಪೌರಾಯುಕ್ತ ಉದಯಕುಮಾರ ಬಿ.ಟಿ. ಹೇಳಿದರು.  


ಅವರು ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯ ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಬಿಳಿ ಕೋಲಿನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಧರಿಗೆ ಈ ಆಧುನಿಕ ತಂತ್ರಜ್ಞಾನದ ಬಿಳಿ ಕೋಲುಗಳು ಕಣ್ಣಿನ ರೀತಿಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿವೆ, ಅವರು ಸಹ ಇತರರಂತೆ ಸಾಮಾನ್ಯವಾಗಿ ಚಲಿಸಬಹುದಾಗಿದೆ ಎಂದ ಅವರು  ಸ್ನೇಹದೀಪ ಸಂಸ್ಥೆಯು ಅತ್ಯುತ್ತಮವಾಗಿ ತನ್ನ ಮಾನವೀಯ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ದಿನಾಚರಣೆಯಲ್ಲಿ ನಜರುಲ್ಲಾ ಕಿಲೇದಾರ,  ಯೋಗೇಶ, ಭವಾನಿ ಶಂಕರ್ ಸೇರಿದಂತೆ ಮತ್ತಿತರ ಗಣ್ಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ