ಮನರಂಜನೆ

ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ

ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ

ಬೆಂಗಳೂರು,ನ 19: ಸ್ಯಾಂಡಲ್ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನರಾಗಿದ್ದಾರೆ.

ನ. 19ರಂದು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಶಾಹುರಾಜ್ ಶಿಂಧೆ ಕೊನೆಯುಸಿರೆಳೆದಿದ್ದಾರೆ ಎಂದು  ತಿಳಿದುಬಂದಿದೆ.

ಹದಿಮೂರು ವರ್ಷಗಳ ಹಿಂದೆ 2007ರಲ್ಲಿ ಬಿಡುಗಡೆಯಾದ  'ಸ್ನೇಹನಾ  ಪ್ರೀತಿನಾ' ಸಿನಿಮಾ ಮೂಲಕ ಶಾಹುರಾಜ್ ಶಿಂಧೆ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದರು. ಚಿತ್ರದಲ್ಲಿ ನಟ ಆದಿತ್ಯ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ದರ್ಶನ್ ನಟನೆಯ ‘ಅರ್ಜುನ್’ ಚಿತ್ರವನ್ನೂ ಸಹ ಇವರೇ  ನಿರ್ದೇಶಿಸಿದ್ದರು.  ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು. ಬಳಿಕ 2011ರಲ್ಲಿ ಪ್ರೇಮ ಚಂದ್ರಮ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದರು. ನಂತರ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು.

ಸುದ್ದಿ ಓದಿ