ಬಡವರ ಬ್ಯಾಂಕ್ ಖಾತೆಗಳಿಗೆ, ೫೩ ಸಾವಿರ ಕೋಟಿ ರೂ ನೇರ ನಗದು ವರ್ಗಾವಣೆ; ಕೇಂದ್ರ ಸರ್ಕಾರ
ನವದೆಹಲಿ,ಜೂನ್ ೮, ಬಡ ಜನರ ಖಾತೆಗಳಿಗೆ ನೇರವಾಗಿ ನಗದು ವರ್ಗಾಯಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪದೇ ಪದೇ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿರುವ ಬಗ್ಗೆ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಸೋಮವಾರ ತೀವ್ರವಾಗಿ ಸ್ಪಂದಿಸಿದ್ದಾರೆ. ದೇಶವನ್ನು ೬೦ ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಬಡವರಿಗಾಗಿ ಬ್ಯಾಂಕ್ ಖಾತೆ ತೆರೆಸಬೇಕು ಎಂದು ಅನಿಸಲೇ ಇಲ್ಲ. ನೇರ ನಗದು ವರ್ಗಾವಣೆಗಾಗಿ ಬಡವರಿಗೆ ಬ್ಯಾಂಕ್ ಖಾತೆ ತೆರಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರಗಾಗಿ ಬ್ಯಾಂಕ್ ಖಾತೆ ತೆರೆಯದವರು, ಈಗ ನೇರ ನಗದು ಹಣ ವರ್ಗಾಯಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವುದು ಅಸಂಬದ್ದ ಎಂದು ಲೇವಡಿಮಾಡಿದರು.
ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುತ್ತಿರುವುದು, ೪೦ ಕೋಟಿ ಜನಧನ್ ಬ್ಯಾಂಕ್ ಖಾತೆ ತೆರೆಸಿರುವುದು ನರೇಂದ್ರ ಮೋದಿ ಸರ್ಕಾರ ಎಂದು ಅವರು ಒತ್ತಿ ಹೇಳಿದರು. ರಾಜಕೀಯ ಮಾಡಬೇಕು ಎನ್ನುವವರು ರಾಜಕೀಯ ಮಾಡಿಕೊಳ್ಳಲಿ, ನಮ್ಮ ಸರ್ಕಾರ ಮಾತ್ರ ದೇಶ ಸೇವೆಗೆ ಕಟಿಬದ್ದವಾಗಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟೀಕೆಗೆ ತಿರುಗೇಟು ನೀಡಿದ್ದಾರೆ. ಕೇವಲ ಒಂದೂವರೆ ತಿಂಗಳಲ್ಲಿ ಕೇಂದ್ರ ಸರ್ಕಾರ ೪೩ ಕೋಟಿ ಮಂದಿ ಜನರಿಗೆ ೫೩ ಸಾವಿರ ಕೋಟಿ ನಗದು ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದೆ ಎಂದು ಠಾಕೂರ್ ತಿಳಿಸಿದ್ದಾರೆ. ಈ ತಿಂಗಳ ಆರಂಭದಿಂದ ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ೨೦.೫ ಕೋಟಿ ರೂಪಾಯಿ ಜಮೆ ಮಾಡಿದೆ ಉಳಿದವರ ಖಾತೆಗಳಿಗೂ ಹಣ ಜಮೆಯಾಗಲಿದೆ ಎಂದರು. ವರ್ತಕರು, ಉದ್ಯಮಿಗಳ ೨.೮೮ ಲಕ್ಷ ಘಟಕಗಳಿಗೆ ಒಂದು ವಾರದಲ್ಲಿ ೧೮ ೦೦೦ ಕೋಟಿ ಮಂಜೂರು ಮಾಡಲಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾ ಭರವಸೆ ನೀಡಿದಂತೆ ಕಾರ್ಯನಿರ್ವಹಿಸಲಿದೆ. ಜನರಿಗೆ ಏನು ಅಗತ್ಯವಿರುವುದನ್ನು ಮಾಡಲು ಬದ್ದವಾಗಿದೆ ಸಚಿವ ಠಾಕೂರ್ ಸ್ಪಷ್ಟಪಡಿಸಿದರು.