ಗೋವಾ ಕಾಂಗ್ರೆಸ್ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ : ಕಾಮತ್ ಸ್ವಾಗತ
ಪಣಜಿ, ಸೆಪ್ಟೆಂಬರ್ 12: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಗೋವಾ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಮಾಡಿರುವುದನ್ನು ಗೋವಾ ವಿರೋಧ ಪಕ್ಷದ ಮುಖಂಡ ದಿಗಂಬಾರ್ ಕಾಮತ್ ಶನಿವಾರ ಸ್ವಾಗತಿಸಿದ್ದಾರೆ.
''ದಿನೇಶ್ ಗುಂಡೂರಾವ್ ಅವರನ್ನು ಗೋವಾದ ಉಸ್ತುವಾರಿ ಆಗಿ ನೇಮಕ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಜನರಿಗೆ ಸ್ನೇಹ ಮತ್ತು ಸೂಕ್ಷ್ಮ ಆಡಳಿತವನ್ನು ಒದಗಿಸಲು ಅವರು ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವಿನತ್ತ ಮಾರ್ಗದರ್ಶನ ನೀಡುತ್ತಾರೆ ಎಂದು ನನಗೆ ಖಾತರಿಯಿದೆ. ಅವರ ನೇಮಕಾತಿಗಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.
ದಿನೇಶ್ ಗುಂಡೂರಾವ್ ಅವರನ್ನು ತಮಿಳುನಾಡು, ಪುದುಚೆರಿ ಮತ್ತು ಗೋವಾದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯನ್ನಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಸೆಪ್ಟೆಂಬರ್ 11 ರಂದು ನೇಮಕ ಮಾಡಿದರು.
ಈವರೆಗೂ ಗೋವಾದಲ್ಲಿ ಪಕ್ಷದ ಉಸ್ತುವಾರಿಯಾಗಿದ್ದ ತಮಿಳುನಾಡಿನ ಕಾಂಗ್ರೆಸ್ ನಾಯಕ ಡಾ ಎ ಚೆಲ್ಲಕುಮಾರ್ ಅವರ ಸ್ಥಾನವನ್ನು ದಿನೇಶ್ ಗುಂಡೂರಾವ್ ಭರ್ತಿ ಮಾಡಿದ್ದಾರೆ. ಚೆಲ್ಲಕುಮಾರ್ ಅವರನ್ನು ಒಡಿಶಾದ ಪಕ್ಷದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.