ಬಳ್ಳಾರಿ

ಡಿಜಿಟಲ್ ಜನಗಣತಿ 2027; ಆನ್‌ಲೈನ್ ನೊಂದಣಿಗೆ ಅವಕಾಶ

ಡಿಜಿಟಲ್ ಜನಗಣತಿ 2027; ಆನ್‌ಲೈನ್ ನೊಂದಣಿಗೆ ಅವಕಾಶ

ಲೋಕದರ್ಶನ ವರದಿ 

ಬಳ್ಳಾರಿ 31: ಜನಗಣತಿ-2027 ಕಾರ್ಯವು ಇದೇ ಏಪ್ರಿಲ್ 01 ನಿಂದ ಆರಂಭವಾಗಲಿದ್ದು,  ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಹಾಗಾಗಿ ನಾಗರಿಕರಿಗೆ ಆನ್‌ಲೈನ್ ಮೂಲಕ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಹೇಳಿದರು. ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜನಗಣತಿ ಕಾರ್ಯಕುರಿತು ಮಂಗಳವಾರ ಏರಿ​‍್ಡಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜನಗಣತಿ-2027ರ ಕಾರ್ಯವುದೇಶದ 16ನೇ ಹಾಗೂ ಸ್ವಾತಂತ್ರ್ಯ ನಂತರದ 8ನೇ ಜನಗಣತಿ ಪ್ರಕ್ರಿಯೆಯಾಗಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್ ಕಾರಣದಿಂದ ವಿಳಂಬವಾಗಿದ್ದು, ಈಗ 2027ರಲ್ಲಿ ಆರಂಭವಾಗುತ್ತಿದೆಎಂದರು. ಜನಗಣತಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ನಿಖರ ದತ್ತಾಂಶ ಒದಗಿಸುವ ಮೂಲಕ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದುತಿಳಿಸಿದರು. 


ಸುದ್ದಿ ಓದಿ