ಕಾಗವಾಡ

ಧರ್ಮಸ್ಥಳ ಸಂಸ್ಥೆ ಬಡಜನರಿಗೆ ವರದಾನವಾಗಿದೆ

ಧರ್ಮಸ್ಥಳ ಸಂಸ್ಥೆ ಬಡಜನರಿಗೆ ವರದಾನವಾಗಿದೆ

ಕಾಗವಾಡ 03: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಟ್ಟಿ ಕೊಡುವುದರ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿ ಬಡ ಜನರಿಗೆ ವರದಾನವಾಗಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ವಿಠ್ಠಲ ಹಳ್ಳೋಳಿ ಹೇಳಿದರು.  ಅವರು ತಾಲೂಕಿನ ಮೋಳೆ ಗ್ರಾಮದ ಬಡ ಮಹಿಳೆ ಸಾವಕ್ಕ ಅಂಬಣ್ಣಾ ಮುಂಜೆ ಅವರಿಗೆ ಧರ್ಮಸ್ಥಳ ಗಾಮೀಣಾಭಿವೃದಿ ಸಂಸ್ಥೆ ವತಿಯಿಂದ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಮಾಡಿ ಮಾತನಾಡಿ ಡಾ.ವೀರೇಂದ್ರ ಹೆಗಡೆ ಅವರ ಧರ್ಮಸ್ಥಳ ಸಂಸ್ಥೆಯು ಇದುವರೆಗೆ ತಾಲೂಕಿನ ವ್ಯಾಪ್ತಿಯಲ್ಲಿ 5 ನೇ ಮನೆ,ರಾಜ್ಯದಲ್ಲಿ 852 ನೇ ಮನೆ ಹಸ್ತಾಂತರ ಸಂಸ್ಥೆ ಮಾಡಿದೆ ಅದರಂತೆ ಮೋಳೆ ಗ್ರಾಮದ ಬಡ ಸಾವಕ್ಕ ಅವರು ಇದ್ದ ಮನೆ ಬೀಳುವ ಸ್ಥಿತಿಯಲ್ಲಿ ಇರುವುದನ್ನು ಗುರುತಿಸಿ ಅವರಿಗೆ ಸಂಸ್ಥೆ ವತಿಯಿಂದ ಪ್ರತಿ ತಿಂಗಳು ಒಂದು ಸಾವಿರ ಮಾಶಾಸನ ನೀಡಿ ಈಗ ಅವರಿಗೆ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದಾರೆ ಇಂತಹ ಸಾಮಾಜಮುಕಿಖಿ ಕೆಲಸಗಳು ನಿರಂತರವಾಗಿ ಧರ್ಮಸ್ಥಳ ಸಂಸ್ಥೆ ಮಾಡುತ್ತ ಬಡಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದು ದೇಶಕ್ಕೆ ಮಾದರಿ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.  ಮುಖಂಡರಾದ ಶಿವಾನಂದ ಹೊಸಮನಿ, ಮಹಾದೇವ ಐನಾಪುರೆ,ಬಸವರಾಜ ತೇಲಿ,ಮಹೇಶ ಬಜಂತ್ರಿ,ತಾಲ್ಲೂಕು ಯೋಜನಾಧಿಕಾರಿ ಸಂಜೀವ ಮರಾಠಿ,ವಲಯ ಮೇಲ್ವಿಚಾರಕರು ಸವಿತಾ ದೇಸಾಯಿ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅನಸೂಯಾ ಸಪ್ಪಡಲಿ,ಬಿಸಿ ಮ್ಯಾನೇಜರ್ ಸಂತೋಷ ಸೇರಿದಂತೆ ಗ್ರಾಮದ ಮಹಿಳೆಯರು ಇದ್ದರು.  


ಸುದ್ದಿ ಓದಿ