ವೈವಾಹಿಕ ಬದುಕಿನಿಂದ ದೂರ ಸರಿದ ತಮಿಳು ನಟ ಧನುಷ್
ಚೆನ್ನೈ, ಜ 18 ತಮಿಳು ನಟ ಧನುಷ್ ಬರೋಬ್ಬರಿ ತಮ್ಮ 18
ವರ್ಷಗಳ ವೈವಾಹಿಕ ಜೀವನದಿಂದ ದೂರಸರಿಯಲು ನಿರ್ಧರಿಸಿದ್ದಾರೆ. ಆ ಮೂಲಕ
ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರಿಂದ ಬೇರ್ಪಟ್ಟಿದ್ದಾರೆ
ಸ್ನೇಹಿತರು, ದಂಪತಿಗಳು, ಪೋಷಕರಾಗಿ ಹಾಗೂ ಪರಸ್ಪರ ಹಿತೈಷಿಗಳಾಗಿ ಕಳೆದ 18 ವರ್ಷಗಳ
ಕಾಲ ಜೀವನ ಮಾಡಿದೆವು. ಈ ಪ್ರಯಾಣ ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಹಾಗೂ
ಹೊಂದಿಕೊಳ್ಳುವಿಕೆಯಿಂದ ಕೂಡಿದೆ ಎಂದು ಧನುಷ್ ಟ್ವೀಟರ್ ನಲ್ಲಿ
ಬರೆದುಕೊಂಡಿದ್ದಾರೆ.
ಇಂದು ನಾವು ನಮ್ಮ ದಾರಿಗಳನ್ನು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದಿರುವ ಅವರು, ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ, ಅದನ್ನು ನಿಭಾಯಿಸಲು ನಮಗೆ ಗೌಪ್ಯತೆಯನ್ನು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.