ಯಡೂರ ವೀರಭದ್ರೇಶ್ವರ ದರ್ಶನಕ್ಕೆ ಭಕ್ತರಿಗೆ ಅವಕಾಶ
ಚಿಕ್ಕೋಡಿ 05: ಎರಡನೆ ಅಲೆ ಮಹಾಮಾರಿ ಕೊರೊನಾ ವ್ಯಾಪಕವಾಗಿ ಹಬ್ಬಿಕೊಂಡಿರುವ ಪರಿಣಾಮ ಕಳೆದ ಎರಡುವರೆ ತಿಂಗಳಿಂದ ಬಾಗಿಲು ಮುಚ್ಚಿಕೊಂಡಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನದ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ, ದೇವಸ್ಥಾನ ಓಪನ್ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದರು.
ಮಹಾಮಾರಿ ಕೊರೊನಾವನ್ನು ಕಟ್ಟಿಹಾಕಲು ರಾಜ್ಯಾದ್ಯಂತ ಲಾಕಡೌನ ಜಾರಿ ಮಾಡಿ_ದೇವಸ್ಥಾನಗಳಲ್ಲಿ ಭಕ್ತರು ಪ್ರವೇಶಿಸದಂತೆ ದೇವಸ್ಥಾನಗಳನ್ನು ಬಂದಮಾಡುವಂತೆ ಸರ್ಕಾರ ಆದೇಶಿಸಿತ್ತು. ಸದ್ಯ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದಂತೆ, ಸರ್ಕಾರ ಸೋಮವಾರದಿಂದ ಅನಲಾಕ್ ಜಾರಿ ಮಾಡಿದೆ. ಇತ್ತ ಚಿಕ್ಕೋಡಿ ತಾಲೂಕಾದ್ಯಂತ ದೇವಸ್ಥಾನಗಳು ಓಪನ್ ಆಗಿವೆ. ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರಿ ವೀರಭದ್ರೇಶ್ವರ ದೇವಸ್ಥಾನದ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ, ದೇವಸ್ಥಾನವನ್ನು ಓಪನ್ ಮಾಡಿ_ಭಕ್ತರಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಭಕ್ತರಿಗೆ ಮಾಸ್ಕ,ಸಾಮಾಜಿಕ ಅಂತರ,ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೋವಿಡ್ ನಿಯಮಗಳ ಪ್ರಕಾರ ದರ್ಶನಕ್ಕೆ ದೇವಸ್ಥಾನ ಕಮೀಟಿ ಅವಕಾಶ ಕಲ್ಪಿಸಿದೆ. ಭಕ್ತರು ಸಹ ಕೋವಿಡ್ ನಿಯಮಗಳ ಪ್ರಕಾರ ಸಾಮಾಜಿಕ ಅಂತರ ಕಾಯ್ದು,ಮಾಸ್ಕ ಧರಿಸಿಕೊಂಡು, ವೀರಭದ್ರೇಶ್ವರ ದರ್ಶನವನ್ನು ಪಡೆದುಕೊಂಡರು. ಕಳೆದ ಹಲವು ತಿಂಗಳುಗಳಿಂದ ದರ್ಶನಕ್ಕೆ ಕಾದುಕುಳಿತಿದ್ದ ಭಕ್ತರು ಸೋಮವಾರ ಬೆಳಂಬೆಳಗ್ಗೆ ಶ್ರಿವೀರಭದ್ರಶ್ವೆರ ದರ್ಶನವನ್ನು ಪಡೆಯಲು ದೇವಸ್ಥಾನದತ್ತ ಭಕ್ತರ ದಂಡು ಹರಿದು ಬಂದಿತ್ತು. ಭಕ್ತರು ಶ್ರಿವೀರಭದ್ರಶ್ವೆರ ದರ್ಶನ ಪಡೆದು ಪಾವನರಾದರು.
ನೆರೆಯ ಮಹಾರಾಷ್ಟ್ರದ ಹೆಚ್ಚಿನ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಪ್ರವೇಶ ಮಾಡುವ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಖಡಕ್ ನಿಯಮಗಳನ್ನು ಜಾರಿ ಮಾಡಲಾಗಿದೆ. ಭಕ್ತರಿಗೆ ಗರ್ಭಗುಡಿಯ ಒಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಹಾಗೂ ಅಭಿಷೇಕ, ತೀರ್ಥ, ಪ್ರಸಾದ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ_ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು.