ದೇಶದ ಸಮಸ್ಯೆಗಳಿಗೆ ಅಭಿವೃದ್ಧಿಯೇ ಪರಿಹಾರ: ಪ್ರೊ.ಸತೀಶ್ ದೇಶಪಾಂಡೆ
ಹೋಸಪೇಟೆ 19 : ದೇಶ ಇಂದು ಅಭಿವೃದ್ಧಿಯ ಹೊರತಾಗಿ ಕೊಮುವಾರು ವಿಷಯಗಳಿಂದ ಬಳಲುತ್ತಿದೆ. ಈ ಸಮಸ್ಯೆಗಳಿಂದ ಹೊರಬರಲು ಅಭಿವೃದ್ಧಿ ಒಂದೇ ಪರಿಹಾರವಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ರಾಜ್ಯ ಶಿಕ್ಷಣ ಆಯೋಗದ ಸದಸ್ಯರಾದ ಪ್ರೊ. ಸತೀಶ್ ದೇಶಪಾಂಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ, ಅಭಿವೃದ್ಧಿ ಅಧ್ಯಯನ ವಿಭಾಗದ ವತಿಯಿಂದ ಪಂಪ ಸಭಾಂಗಣದಲ್ಲಿ 19ನೇ ಜುಲೈ 2024ರಂದು ಆಯೋಜಿಸಿಲಾಗಿದ್ದ ಇತ್ತೀಚಿನ ಅಭಿವೃದ್ಧಿ ಮಾದರಿಗಳು ಮತ್ತು ಸಮಾಜ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಮುಂದುವರೆದು ಅಭಿವೃದ್ಧಿ ಎಂಬುದು ಸಮಾಜದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ವಿಷಯಗಳು ಬದಲಾದಂತೆ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಿದೆ. ಇದಕ್ಕೆ ಪ್ರಾಚೀನ, ಮಧ್ಯಕಾಲ, ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಕುರಿತು ಬದಲಾದ ಧೊರಣೆಗಳನ್ನು ಕಾಣಬಹುದು.
ಮಾನವ ಅಭಿವೃದ್ಧಿ ಎಂಬ ಕಲ್ಪನೆ ಮೂಡುವುದಕ್ಕಿಂತಲೂ ಆರಂಭದಲ್ಲಿ ಇದ್ದುದು ಕೇವಲ ಆರ್ಥಿಕ ಅಭಿವೃದ್ಧಿ. ಬದಲಾದ ಕಾಲದಲ್ಲಿ ಅಭಿವೃದ್ಧಿ ಎಂದರೆ ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಮಾನವ ಅಭಿವೃದ್ಧಿ ಎಂಬ ವಿಶಾಲವಾದ ವ್ಯಾಪ್ತಿಯನ್ನು ಆವರಿಸಿಕೊಂಡಿದೆ. ದೇಶ ಸ್ವಾತಂತ್ರ-್ಯ ಪಡೆದ ಆರಂಭದ ದಿನಗಳಲ್ಲಿ ಸಮಾಜದಲ್ಲಿದ್ದ ವರ್ಣಭೇದ, ಜಾತಿಯತೆ, ಧರ್ಮ ಗಳಂತಹ ಕಂದಕಗಳಿಗೆ ಅಭಿವೃದ್ಧಿಯೇ ಪರಿಹಾರವಾಗಿತ್ತು. ಆದುದರಿಂದ ನೆಹರೂರವರ ಮೂರು ದಶಕಗಳ ಕಾಲವನ್ನು ಅಭಿವೃದ್ಧಿಯ ಸುವರ್ಣ ಯುಗ ಎಂದು ಕರೆಯಲಾಗಿದೆ. ಆದರೆ ಇಂದು ವರ್ಣಭೇದ ಎಲ್ಲಾ ದೇಶಗಳಲ್ಲಿ ಸಾಮಾನ್ಯವಾಗಿದೆ ಇದು ಸೈದ್ಧಾಂತಿಕವಾಗಿ ಅಭಿವೃದ್ಧಿಗೆ ಮಾರಕವಾದ ವಿಷಯವಾಗಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಪ್ರೊ.ವಿಜಯ್ ಪೂಣಚ್ಚ ತಂಬಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನ್ನಡ ವಿಶ್ವವಿದ್ಯಾಲಯವು ಬೌದ್ಧಿಕವಾಗಿ ಇತರೆ ವಿಶ್ವವಿದ್ಯಾಲಯಗಳಿಗಿಂತ ಮುಂದಿದೆ. ಇಲ್ಲಿನ ಸಂಶೋಧನಾರ್ಥಿಗಳು ಅತ್ಯುತ್ತಮವಾದ ವಿಷಯ ಮಂಡನೆಯಲ್ಲಿ ಹಿಂದೆ ಬಿದ್ದಿಲ್ಲ ಎಂದರು.
ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಗೀತಮ್ಮ ಅವರು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಅಧ್ಯಾಪಕರು ಸಿಬ್ಬಂದಿಗಳು ಸಂಶೋಧಾನಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.