ಅಥಣಿ

ಅಭಿವೃದ್ಧಿ ಮಾಡಿ ಇಲ್ಲವಾದರೆ ಕರ್ನಾಟಕಕ್ಕೆ ಸೇರ್ಪಡೆ ಮಾಡಿ

ಅಭಿವೃದ್ಧಿ ಮಾಡಿ ಇಲ್ಲವಾದರೆ ಕರ್ನಾಟಕಕ್ಕೆ ಸೇರ್ಪಡೆ  ಮಾಡಿ

ಕೈಗಾರಿಕಾ ಸಚಿವ ಉದಯ ಸಾಂಮತಗೆ ಜತ್ ಕನ್ನಡಿಗರ ಆಗ್ರಹ 

ಸಂಬರಗಿ 08: ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಪೂರ್ವ ಭಾಗದ 42 ಹಳ್ಳಿಗಳನ್ನು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಯಿಂದ ವಂಚಿತಗೊಳಿಸಿದೆ. ಕರ್ನಾಟಕ ರಾಜ್ಯದ ಅಂದಿನ ನೀರಾವರಿ ಸಚಿವ ಎಂ.ಬಿ. ಪಾಟೀಲ ಅವರ ಪುಣ್ಯದಿಂದ ಈ ಭಾಗದ 30 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಲಭ್ಯವಾಗಿದೆ. ಮಹಾ ಸರ್ಕಾರ ಅಭಿವೃದ್ಧಿ ಮಾಡಲಿ, ಇಲ್ಲವಾದರೆ ಕರ್ನಾಟಕ ಸೇರಲು ಎನ್‌ಓಸಿ ನೀಡಿರಿ ಎಂದು ಕನ್ನಡಿಗರು ಕೈಗಾರಿಕಾ ಸಚಿವ ಉದಯ ಸಾಂಮತ ಇವರು ಮುಂದೆ ತಮ್ಮ ಅಳವನ್ನು ತೋಡಿಕೊಂಡಿದ್ದರು. 

 ಮಂಗಳವಾರ ತಿಕುಂಡಿ ಗ್ರಾಮದಲ್ಲಿ ಸಚಿವರ ಉಪಸ್ಥಿತಿಯಲ್ಲಿ ಜತ್ತ ಪೂರ್ವ ಭಾಗದ ಬರಪೀಡಿತ 42 ಗ್ರಾಮದ ಬಗ್ಗೆ ಚರ್ಚೆ ನಡೆಸಿ ಕನ್ನಡಿಗರು ಮಾತನಾಡಿ ಈ ಭಾಗದಲ್ಲಿ ಕಳೆದ 50 ವರ್ಷಗಳಿಂದ ಯಾವೂದೆ ಸರ್ಕಾರ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಕುಂಠಿತವಾಗಿದೆ. ಈ ಭಾಗದ ಜನರು ಸಂಕಟದಲ್ಲಿ ಸಿಲುಕಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡಿಗರ ಸಮಸ್ಯೆಯತ್ತ ಗಮನ ಹರಿಸಿ ಮಾನವತೆಯ ದೃಷ್ಟಿಯಿಂದ ಕಾಲುವೆ ಮೂಲಕ ತಿಕ್ಕುಂಡಿ ಕೆರೆಯನ್ನು ತುಂಬಿ ಹರಿಯುವಂತೆ ಮಾಡಿದೆ. ಕನಾಟಕ ಸರ್ಕಾರಕೆ ಅಭಿನಂದನೆ ಸಲುಸುತ್ತೇವೆ. ಅಭಿವೃದ್ಧಿ ಮಾಡಿ ಇಲ್ಲವಾದರೆ ಕರ್ನಾಟಕಕ್ಕೆ ಸೇರೆ​‍್ಡ ಮಾಡಿ ಎಂದು ಆಗ್ರಹಿಸಿದರು. 

ಉದಯ ಸಾಮಂತ ಮಾತನಾಡಿ ನಮ್ಮ ಸರ್ಕಾರ ನಿಮ್ಮ ಬೆನ್ನುಲುಬಾಗಿ ನಿಂತು ಜತ್ ಪೂರ್ವ ಭಾಗದ 42 ಗ್ರಾಮಗಳಿಗೆ ನಾವು ನೀರಾವರಿ ಸೌಲಭ್ಯವನ್ನು ಕಲ್ಪಿಸುತ್ತೇವೆ. ಈ ಭಾಗದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಲು ನಾವು ಸಿದ್ಧರಾಗಿದ್ದೀವಿ ಎಂದು ಭರವಸೆ ನೀಡಿದರು.  ಈ ವೇಳೆ ಜತ ಶಾಸಕ ವಿಕ್ರಮ ಸಾವಂತ ಹಾಗೂ ಗಡಿಭಾಗದ ಕನ್ನಡಿಗರು ಉಪಸ್ಥಿತರಿದ್ದರು. ಈ ವೇಳೆ ಹಲವಾರು ಸಮಸ್ಯೆ ಕುರಿತು ಚರ್ಚೆ ಮಾಡಲಾಯಿತು. 


ಸುದ್ದಿ ಓದಿ