ಶಿಗ್ಗಾವ್

ಡಿ. ದೇವರಾಜ ಅರಸು ಅಂತ:ಕರಣದ ವ್ಯಕ್ತಿ: ಇಂದೂಧರ ಮುತ್ತಳ್ಳಿ

ಡಿ. ದೇವರಾಜ ಅರಸು ಅಂತ:ಕರಣದ ವ್ಯಕ್ತಿ: ಇಂದೂಧರ ಮುತ್ತಳ್ಳಿ

ಶಿಗ್ಗಾವಿ 21: ಡಿ. ದೇವರಾಜ ಅರಸು ಅವರಲ್ಲಿ ಅಂತ:ಕರಣದ ವ್ಯಕ್ತಿಗಳು ಎನ್ನಲು ಬಹಳಷ್ಟು ನಿದರ್ಶನಗಳನ್ನ ಕಂಡಿದ್ದೇವೆ, ಅತ್ಯಂತ ತಳಮಟ್ಟದ ವ್ಯಕ್ತಿಗಳನ್ನೂ ಮುಂಚೂಣಿಯಲ್ಲಿ ತರಲು ಪ್ರಯತ್ನಿಸಿದವರು ದೇವರಾಜ ಅರಸು ಎಂದು ತಾಲೂಕ ಹಿಂದುಳಿದ ಕಲ್ಯಾಣಾಧಿಕಾರಿ ಇಂದೂಧರ ಮುತ್ತಳ್ಳಿ ಹೇಳಿದರು. 

ಪಟ್ಟಣದ ಸರಕಾರಿ ಆಡಳಿತ ಭವನದಲ್ಲಿ ನಡೆದ ಡಿ. ದೇವರಾಜ ಅರಸರವರ 108 ನೇ ಜಯಂತಿ ಅಂಗವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರ ಬದುಕನ್ನ ಎಲ್ಲರೂ ಆದರ್ಶಮಯವಾಗಿಟ್ಟುಕೊಳ್ಳುವ ಅವಶ್ಯಕತೆ ಇದೆ, ಅರಸರವರು ಬಡವರ ಪಾಲಿಗೆ ಭೂ ಭಾಗ್ಯದಾತರು, ವಿಧವೆಯರಿಗೆ, ಅಂಗವಿಕಲರಿಗೆ ಅನ್ನದಾತರು, ವಿಧ್ಯಾರ್ಥಿಗಳಿಗೆ ವಸತಿ ನಿಲಯ ದಾತರಾಗಿದ್ದಾರೆ ಎಂದರು. 

ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಉಳುವವನೆ ಒಡೆಯ ಆದೇಶವನ್ನ ತಂದವರು, ಹಿಂದುಳಿದ ವರ್ಗಗಳ ಆಶಾಕಿರಣ ಯಾರಾದರು ಇದ್ದರೆ ಅದು ಡಿ ದೇವರಾಜ ಅರಸು ಅವರು, ಕಾರ್ಮಿಕ, ಕೃಷಿಕ, ಸೈನಿಕ ಮತ್ತು ಶಿಕ್ಷಕ ಈ ದೇಶದ ಬೆನ್ನೆಲುಬಾಗಿದ್ದಾರೆ ಎಂದರು.  

ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಇಓ ಎಂ ಬಿ ಅಂಬಿಗೇರ, ರಾಜ್ಯದಲ್ಲಿ ದೇವರಾಜ ಅರಸು ಅವರ ಬಗ್ಗೆ ಪ್ರಭಂದ ಬರೆದು ಪ್ರಥಮ ಸ್ಥಾನ ಪಡೆದವರಲ್ಲಿ ಇಲಾಖೆಯ ಇಂದುಧರ ಮುತ್ತಳ್ಳಿಯವರಾಗಿದ್ದಾರೆ, ವಿದ್ಯಾರ್ಥಿಗಳಿಗೆ ಶ್ರದ್ದೆ ಬಹಳ ಮುಖ್ಯ ಶ್ರದ್ದೆಯಿದ್ದರೆ ಮಾತ್ರ ಎಲ್ಲವೂ ಸಾದ್ಯ ಅಲ್ಲದೇ ನಾನು ಸಹಿತ ವಸತಿ ನಿಲಯದಲ್ಲಿ ಓದಿದ ವಿಧ್ಯಾರ್ಥಿ ಎಂದು ಹೇಳಿದರು.  

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಂಬು ಆಜೂರ, ಕುರುಬ ಸಮಾಜದ ಅದ್ಯಕ್ಷ ಪಕ್ಕೀರ​‍್ಪ ಕುಂದೂರ, ದಲಿತ ಮುಖಂಡ ಅಶೋಕ ಕಾಳೆ, ರೈತ ಸಂಘದ ಅದ್ಯಕ್ಷ ಬಸಲಿಂಗಪ್ಪ ನರಗುಂದ, ವಿಶ್ವಕರ್ಮ ಸಮಾಜದ ಅದ್ಯಕ್ಷ ಕಾಳಪ್ಪ ಬಡಿಗೇರ, ಜಂಗಮ ಸಮಾಜದ ಅದ್ಯಕ್ಷ ಪ್ರಕಾಶ ಹಿರೇಮಠ, ಗಾಣಗೇರ, ಜೀವಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಶಿವಾನಂದ ಹರಿಜನ, ಈರಣ್ಣ ನವಲಗುಂದ ಸೇರಿದಂತೆ ಬಿಸಿಎಂ ಇಲಾಖೆಯ ಸಿಬ್ಬಂದಿಗಳು, ವಸತಿ ನಿಲಯಗಳ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು. ವಸತಿ ನಿಲಯದ ವಿದ್ಯಾರ್ಥಿಗಳು ವಿಶೇಷ ಜಾನಪದ ನೃತ್ಯ, ಭರತ ನಾಟ್ಯ ನೃತ್ಯ ಮಾಡಿದರು. ವಸತಿನಿಲಯ ಪಾಲಕ ರಮೇಶ ಹರಿಜನ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ