ದೇಶಪಾಂಡೆ ಇಂಡಸ್ಟ್ರೀಸ್ಗೆ 50ರ ಸಂಭ್ರಮ; ನೂತನ ಶುಭಾರಂಭ
ಬೆಳಗಾವಿ 04 : ಡೀಸೆಲ್ ಜನರೇಟರ್ ಸೆಟ್ಗಳ ಮಾರಾಟ, ಸರ್ವಿಸಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಐದು ದಶಕಗಳ ಸೇವೆ ಸಲ್ಲಿಸಿರುವ ದೇಶಪಾಂಡೆ ಇಂಡಸ್ಟ್ರೀಸ್ನ 50ನೇ ವರ್ಷಾಚರಣೆ ಅಂಗವಾಗಿ ಉದ್ಯಮಬಾಗದ ಬಿಇಎಂಸಿಐಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ನೂತನ ಕಚೇರಿ ಹಾಗೂ ಕಾರ್ಖಾನೆ ಶುಭಾರಂಭಗೊಂಡಿತು. ಶಾಸಕ ಅಭಯ ಪಾಟೀಲ ಹಾಗೂ ಪ್ರೀತಿ ಪಾಟೀಲ ನೂತನ ಆವರಣವನ್ನು ಉದ್ಘಾಟಿಸಿದರು.
ಸಂಸ್ಥೆಯು ಗ್ರಾಹಕರ ವಿಶ್ವಾಸ ಹಾಗೂ ಗುಣಮಟ್ಟದ ಸೇವೆಯೊಂದಿಗೆ ಬೆಳಗಾವಿ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ತನ್ನದೇ ಆದ ಸ್ಥಾನಮಾನ ಗಳಿಸಿದೆ. ಹೊಸ ಆವರಣದಿಂದ ಸಂಸ್ಥೆಯ ಸೇವೆ ಮತ್ತಷ್ಟು ವಿಸ್ತರಣೆಯಾಗಲಿ ಎಂದು ಅಭಯ ಪಾಟೀಲ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀಕಾಂತ ದೇಸಾಯಿ, ಶ್ರಿಯಾ ದೇಶಪಾಂಡೆ ಸೇರಿದಂತೆ ಗಣ್ಯರು, ಉದ್ಯಮಿಗಳು, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.