ಸ್ವಾತಂತ್ರ್ಯ ಸೇನಾನಿಗಳ ಸ್ಮರಣಾರ್ಥ ದಿ.25 ರಂದು ದೇಶ ಭಕ್ತಿ ಓಟ
ಬೈಲಹೊಂಗಲ 22: ಶೌಟ್ಸ್ ಮತ್ತು ಬ್ರಾಂಡ್ ಟೌನ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ದಿ.25 ರಂದು ಬೆಳಿಗ್ಗೆ 7 ಘಂಟೆಗೆ ರಾಣಿ ಚೆನ್ನಮ್ಮ ದೇಶ ಭಕ್ತಿ ಓಟ ಜರುಗಲಿದೆ ಎಂದು ಅಜೇಯ ಭಜಂತ್ರಿ ತಿಳಿಸಿದರು.
ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗ್ಠೋ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಜರುಗಲಿದ್ದು ದಿ.25 ರಂದು ಬೆಳಿಗ್ಗೆ ಅಂಬೇಡ್ಕರ ಗಾರ್ಡನನಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಮಟೂರ ಬಾಳಪ್ಪ ವೃತ್ತ ತಲುಪುವದು. ದೇಶ ಭಕ್ತಿ ಓಟದ ಉದ್ದಕ್ಕೂ ಜ್ಯೋತಿ ಹಿಡಿದು ಜೈ ಚೆನ್ನಮ್ಮ, ಜೈ ರಾಯಣ್ಣ, ಜೈ ಅಮಟೂರ ಬಾಳಪ್ಪ ಅನೇಕ ಸ್ವಾತಂತ್ರ್ಯ ಸೇನಾನಿಗಳ ಘೋಷಣೆ ಕೂಗಲಾಗವುದು. ಪ್ರತಿಯೊಬ್ಬರು ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ಮಾಡಬೇಕೆಂದರು.
ಮಹಾಂತೇಶ ಅಂಗಡಿ, ಸಣಗೌಡ ಸಂಗನಗೌಡರ, ಬಾಬಾಜಾನ ಕಿಲ್ಲೇದಾರ, ಅರ್ಭಾಜ ಮುಲ್ಲಾ ಮಾತನಾಡಿ, ರಾಣಿ ಚೆನ್ನಮ್ಮ ದೇಶ ಭಕ್ತಿ ಓಟ ಕಾರ್ಯಕ್ರಮವನ್ನು ಜಾತ್ರಾತೀತ, ಪಕ್ಷಾತೀತವಾಗಿ ಹಮ್ಮಿಕ್ಕೊಳ್ಳಲಾಗಿದ್ದು ಪ್ರತಿಯೊಬ್ಬರು ಭಾಗವ"ಸಬೇಕು ಎಂದರು.
ಈ ಸಂದರ್ಭದಲ್ಲಿ ಚೆನ್ನಮ್ಮ ಅಭಿಮಾನಿಗಳು, ದೇಶಭಕ್ತ ಯುವಕರು ಇದ್ದರು.