ರಾಣೆಬೆನ್ನೂರ

ವಿಕಲಚೇತನರಿಗೆ ಪರಿಕರಗಳ ವಿವರಣೆ

ವಿಕಲಚೇತನರಿಗೆ ಪರಿಕರಗಳ ವಿವರಣೆ

ರಾಣೆಬೆನ್ನೂರು 11: ಸಮಾಜದಲ್ಲಿ ಬಡವರು ಶ್ರೀಮಂತರು ಸಮಾನವಾಗಿದ್ದಾರೆ ಆದರೆ ಬಡತನದಲ್ಲಿ ಇದ್ದು ಆರ್ಥಿಕವಾಗಿ ಸಮಸ್ಯೆ ಅನುಭವಿಸುವ ಯಾರೇ ಆಗಿರಲಿ ಅಂಥವರನ್ನು ಒಕ್ಕೂಟದ ಸದಸ್ಯರು ಗುರುತಿಸುವುದರ ಮೂಲಕ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಯಾವುದೇ ರೂಪದಲ್ಲಿಯೂ ಸಹಾಯವನ್ನು ಪಡೆಯಬಹುದಾಗಿದೆ  ಎಂದು ಎಸ್ ಕೆಡಿಆರ್ಪಿ ತಾಲೂಕ ಸಂಯೋಜಕ ಸತೀಶ್ ಸೇಟ್ ಹೇಳಿದರು. 

ಶನಿವಾರ ಇಲ್ಲಿನ ಬಸವನಗುಡಿ ನಗರದ ಪಾಂಡುರಂಗ ದೇವಸ್ಥಾನದಲ್ಲಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಆಯೋಜಿಸಿದ್ದ ವಿಕಲಚೇತನರಿಗೆ  ಪರಿಕರಗಳ  ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ತೊಂದರೆ ತಾಪತ್ರಗಳು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ, ಸಮಸ್ಯೆಗಳು ಇದ್ದಲ್ಲಿ, ಸಹಾಯದ ಅವಶ್ಯಕತೆ ಬೇಕಾಗಿದ್ದಲ್ಲಿ ಯಾವುದೇ ಸಂಕೋಚಿತ ಮನೋಭಾವನೆ ಇಲ್ಲವೇ  ಒಕ್ಕೂಟದ ಸದಸ್ಯರ ಮೂಲಕ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಶ್ರೀ ಕ್ಷೇತ್ರದ ಸೇವಾ ಯೋಜನೆಯಲ್ಲಿ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ಎಸ್. ನಾಗರಾಜ್, ವರ್ತಕ ಲಕ್ಷ್ಮಣ ಚಿಂತಾ, ಒಕ್ಕೂಟದ ಅಧ್ಯಕ್ಷ ಹಾಲಮ್ಮ ಹಿರೇಗೌಡ್ರು, ಉಪಾಧ್ಯಕ್ಷ  ಶೋಭಾ ಅಜೋಡಿಮಠ, ಶಶಿಕಲಾ ನೆಲೊಗಲ್, ನಾಗಮ್ಮ ತೆವರಿ ಸೇರಿದಂತೆ ಪದಾಧಿಕಾರಿಗಳು, ಒಕ್ಕೂಟದ  ಸದಸ್ಯರು ಪಾಲ್ಗೊಂಡಿದ್ದರು.45 ಸಾವಿರ ರೂಗಳಿಗಿಂತ ಹೆಚ್ಚು ಮೌಲ್ಯದ ಪರಿಕರಗಳನ್ನು ವಿಕಲಚೇತನರಿಗೆ ನೀಡಲಾಯಿತು. ಅಂಜನಪ್ಪ ಕೆಂಚಪ್ಪ ನವರ ಸ್ವಾಗತಿಸಿದರು.ಎಸ್ ಕೆಡಿಆರ್ಪಿ ಯೋಜನೆಯ ಮೇಲ್ವಿಚಾರಕ  ತಿಮ್ಮಪ್ಪ ನಿರೂಪಿಸಿದರು. ರೇಖಾ ಹುಲ್ಲೂರು ವಂದಿಸಿದರು. 

ಸುದ್ದಿ ಓದಿ