ಬೈಲಹೊಂಗಲ

ಹಲ್ಲುಗಳನ್ನು ರಕ್ಷಿ£ಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಡಾ. ತೌಸಿಫ್

ಹಲ್ಲುಗಳನ್ನು ರಕ್ಷಿ£ಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಡಾ. ತೌಸಿಫ್

ಬೈಲಹೊಂಗಲ 04: ಮಾನವನ ಶರೀರದಲ್ಲಿ ಅತಂತ್ಯ ಶ್ರೇಷ್ಠವಾದ ಅಂಗವಾಗಿರುವ ಹಲ್ಲುಗಳನ್ನು ಅತೀ ಜಾಗೃಕತೆಯಿಂದ ರಕ್ಷಣೆ ಮಾಡಿಕೊಳ್ಳವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ದಂತ ತಜ್ಞ ಡಾ. ತೌಸಿಫ್ ಸಂಗೊಳ್ಳಿ ಹೇಳಿದರು.

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ,  ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಆಯೋಜಿಸಲಾದ ದಂತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ,     ವಿದ್ಯಾರ್ಥಿನಿಯರು ತಮ್ಮ ದಂತಗಳನ್ನು ಶುಚಿಯಾಗಿ ಕಾಪಾಡುವದರ ಮುಖಾಂತರ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಕೆ.ಮದವಾಲ ಅಧ್ಯಕ್ಷತೆ ವಹಿಸಿದ್ದರು.    ವೇದಿಕೆ ಮೇಲೆ ಡಾ. ಮಿಶಭಾ ಸಂಗೊಳ್ಳಿ, ರೆಡ್‍ಕ್ರಾಸ್ ಸಂಚಾಲಕಿ ಪ್ರೊ. ಹೇಮಲತಾ ತೊರಗಲ್ಲ, ಪ್ರೊ. ಅವಿನಾಶ ಎಂ. ಪ್ರೊ ದ್ಯಾಮನ್ನ ಹಾಡಕರ ಇದ್ದರು. ಲಾವಣ್ಯಾ ಕಮ್ಮಾರ ಸ್ವಾಗತಿಸಿದರು,  ಸುಪ್ರಿಯಾ ಶಿವಪೂಜಿ ವಂದಿಸಿದರು. ಲಕ್ಷ್ಮೀ ಬಡಿಗೇರ ನಿರೂಪಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬಿ.ಎ, ಬಿ.ಕಾಂ, ಹಾಗೂ ಬಿ.ಬಿ.ಎ ವಿದ್ಯಾರ್ಥಿನಿಯರ ಹಲ್ಲುಗಳನ್ನು ವೈದ್ಯರು ತಪಾಸಣೆ ಮಾಡಿದರು.

ಸುದ್ದಿ ಓದಿ