ಕುಷ್ಟಗಿ

ಡೆಂಗ್ಯೂ ಜ್ವರ ನಿಜಕ್ಕೂ ಆತಂಕಕಾರಿ ರೋಗ ನಿರ್ಲಕ್ಷ್ಯ ಬೇಡ: ಡಾ. ಕೆ.ಎಸ್ ರಡ್ಡಿ

ಡೆಂಗ್ಯೂ ಜ್ವರ ನಿಜಕ್ಕೂ ಆತಂಕಕಾರಿ ರೋಗ ನಿರ್ಲಕ್ಷ್ಯ ಬೇಡ: ಡಾ. ಕೆ.ಎಸ್ ರಡ್ಡಿ

ಲೋಕದರ್ಶನ ವರದಿ  

ಕುಷ್ಟಗಿ 20: ಡೆಂಗ್ಯೂ ಜ್ವರ ನಿಜಕ್ಕೂ ಆತಂಕಕಾರಿ ರೋಗ ಸಾರ್ವಜನಿಕರು ಇದರ ಬಗ್ಗೆ ನಿಷ್ಕಾಳಜೀವಹಿಸದೆ ಜಾಗೃತರಾಗಬೇಕುಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್ ರಡ್ಡಿ ಹೇಳಿದರು.  

  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಲಯ, ತಾಲೂಕು ಆರೋಗ್ಯ ಅಧಿಕಾರಿಗಳ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗೃತಿ ಜಾತಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು ಹಗಲು ಹೊತ್ತಿನಲ್ಲಿ ಈಜಿಪ್ಟ್‌ ಸೊಳ್ಳೆ ಮನುಷ್ಯನಿಗೆ ಕಚ್ಚುತ್ತದೆ.  


ಇದರಿಂದ ಡೆಂಗ್ಯೂ ಸೇರಿದಂತೆ ಅನೇಕ ರೋಗಗಳು ಹರಡುತ್ತವೆ.  

ಮೂರು ದಿನಕ್ಕು ಹೆಚ್ಚು ನೀರನ್ನು ಮನೆಯಲ್ಲಿ ಶೇಖರಣೆ ಮಾಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಭಯಾನಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿದರು.  


ಈ ಸಂದರ್ಭದಲ್ಲಿ ಡಾ ಚಂದ್ರಕಾಂತ್ ಮಂತ್ರಿ ಷಣ್ಮುಖಪ್ಪ ಕಾಪ್ಸೆ, ಸ್ತ್ರೀರೋಗ ತಜ್ಞೆ ಚಂದ್ರಕಲಾ  ದಂತ ತಜ್ಞೆ ಶ್ರೀ ವಿದ್ಯಾ, ಚರ್ಮ ರೋಗ ತಜ್ಞ ಡಾ.ಶಶಿಧರ, ರಕ್ತ ಪರೀಕ್ಷರಾದ ಬಾಲಾಜಿ ಬಳಿಗಾರ, ಪಾಲಜ್ಜ, ಗವಿಸಿದಪ್ಪ ಉಪ್ಪಾರ, ಪ್ರಕಾಶ ಗುತ್ತಿಗೆದಾರ, ಸಿ.ಎಚ್‌.ಓ ಐಶ್ವರ್ಯ ಕಾಳೆ, ಶೂಶ್ರಕರಾದ ಶಿಲ್ಪಾ, ಶರಣಮ್ಮ  ಮತ್ತು ಆಶಾ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  

ಸಾರ್ವಜನಿಕ ಆಸ್ಪತ್ರೆಯಿಂದ ಆರಂಭವಾದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ  ಜಾಗೃತಿ ಜಾತಾ ಮೆರವಣಿಗೆಯು ಡೆಂಗ್ಯೂ ರೋಗದ ಬಗ್ಗೆ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತದ ಮೂಲಕ ಪುರಸಭೆ ಮಾರ್ಗ ವಾಗಿ ಮರಳಿ ಆಸ್ಪತ್ರೆ ತಲುಪಿತು. 


ಸುದ್ದಿ ಓದಿ