ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ಬಿಡಲು ಆಗ್ರಹ: ಪ್ರತಿಭಟನೆ
ರಾಣೇಬೆನ್ನೂರು 09: ತಾಲೂಕಿನ ಬಹುತೇಕ ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳಿಗೆ ಬರಲು ವಿಧ್ಯಾರ್ಥಿಗಳಿಗೆ ಬಸ್ಸುಗಳ ಸೌಲಭ್ಯವಿಲ್ಲದೇ ಶೈಕ್ಷಣಿಕ ಪಾಠ ಪ್ರವಚನಗಳಿಂದವಂಚಿತರಾಗುತ್ತಿದ್ದಾರೆ. ಕೊಡಲೇ ನಿಗದಿತ ವೇಳೆಗೆ ಬಸ್ ಸಂಚರಿಸಲು ಅನುಕೂಲತೆ ಕಲ್ಪಿಸುವಂತೆ ಆಗ್ರಹಿಸಿದ ಎಸ್.ಎಫ್.ಐ ಕಾರ್ಯಕರ್ತರು ಬಸ್ಸ್ಟ್ಯಾಂಡ್ ಬಳಿ ಪ್ರತಿಭಟಿಸಿ ಮನವಿ ಸಲ್ಲಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಭೋವಿ ಅವರು ನಗರ ಪ್ರದೇಶಕ್ಕೆ ನಿತ್ಯವು ಹತ್ತಾರು ಸಾವಿರ ವಿಧ್ಯಾರ್ಥಿಗಳು ಶಿಕ್ಷಣ ಅಧ್ಯಯನಕ್ಕೆ ಬರುತ್ತಾರೆ. ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಆದರೇ ಬಸ್ಗಳ ಸಂಖ್ಯೆ ಕೂರೆತೆಯಿಂದಾಗಿ ಅನೇಕ ತೂಂದರೆಯನ್ನು ಅನುಭವಿಸುತ್ತಾ ಬರುವಂತಾಗಿದೆ . ಕೊಡಲೇ ಹೆಚ್ಚಿನ ಬಸ್ಗಳನ್ನು ಬಿಡಲು ಕ್ರಮ ಕೈಗೂಳ್ಳಬೇಕು ಎಂದರು.
ಹೂನ್ನತ್ತಿ, ದೇವರಗುಡ್ಡ, ಗುಡ್ಡದ ಆನ್ವೇರಿ, ಬೇಲೂರು, ಅಂಕಸಾಪುರ, ಹರನಗಿರಿ, ಕುದರಿಹಾಳ, ಕುಪ್ಪಲೂರ, ಹಲಗೇರಿ ಸೇರಿದಂತೆ ಮತ್ತಿತರೆ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಬರುತ್ತಿದ್ದು ಶಾಲಾ ಅವಧಿಗು ಮುನ್ನ ಬಸ್ಗಳನ್ನು ಬಿಡಲು ಕ್ರಮ ಕೈಗೂಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಚಲವಾದಿ ಮಹಾ ಸಭಾದಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ತಾಲೂಕು ಕಾರ್ಯದರ್ಶಿ ಶ್ರೀಧರ ಚಲವಾದಿ, ಎಸ್.ಎಫ್.ಐ ಮುಖಂಡರಾದ ಹೂನ್ನಪ್ಪ ಕುದರಿಹಾಳ, ಗುಡ್ಡಪ್ಪ ಮಡಿವಾಳರ, ವಿಜಯ ಲಮಾಣಿ, ಗುರು ಮದ್ಲೇರ, ಶಿವು ಚಲವಾದಿ, ಪ್ರದೀಪ್, ಅಭಿ ಸವಣೂರ, ಶಾರಧಾ ಎಂ, ವನಿತಾ ಆನ್ವೇರಿ, ಮಧು ಚಲವಾದಿ, ರೇಖಾ ಹೆಚ್, ಮಮತಾ, ಭೂಮಿಕಾ ಆರ್. ಸೇರಿದಂತೆ ವಿವಿಧ ಕಾಲೇಜುಗಳ 300 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಬಸ್ಟ್ಯಾಂಡ್ ಬಳಿ ಉಪಸ್ಥಿತರಿದ್ದರು.