ಬೈಲುವದ್ದಿಗೇರಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಹೊಸಪೇಟೆ: ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಸಾಗರ, ಕಾಕುಬಾಳು, ಗುಂಡ್ಲುವದ್ದಿಗೇರಿ ಮತ್ತು ಬೈಲುವದ್ದಿಗೇರಿ ಗ್ರಾಮಗಳಲ್ಲಿ ಹಲವಾರು ಮೂಲ ಸಮಸ್ಯೆಗಳು ಇದ್ದರೂ ಗ್ರಾಮ ಪಂಚಾಯಿತಿ ಸಮರ್ಪಕ ಕೆಲಸಗಳನ್ನು ಮಾಡುತ್ತಿಲ್ಲ. ಹಾಗಾಗಿ, ಕೂಡಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮವಹಿಸಬೇಕು ಎಂದು ಕನರ್ಾಟಕ ರಾಷ್ಟ್ರ ಸಮಿತಿ ಪಕ್ಷದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಪ.ಯ. ಗಣೇಶ ಆಗ್ರಹಿಸಿದರು.
ಶುಕ್ರವಾರ ಕನರ್ಾಟಕ ರಾಷ್ಟ್ರ ಸಮಿತಿ ಪಕ್ಷದ ಕಮಲಾಪುರ ಹೋಬಳಿ ಹಾಗೂ ಧರ್ಮಸಾಗರ ಗ್ರಾಮ ಘಟಕ ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ, ಹೊಸಪೇಟೆ ತಾಲೂಕು ಆಡಳಿತ, ಬಳ್ಳಾರಿ ಜಿಲ್ಲಾಡಳಿತಗಳು ಬಯಲು ಶೌಚ ಮುಕ್ತ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಿವೆ. ಆದರೆ, ಧರ್ಮಸಾಗರ ಗ್ರಾಮದಲ್ಲಿ ಮಹಿಳೆಯರು ಮತ್ತು ಪುರುಷರು ಒಂದೇ ಕಡೆ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಈ ಗ್ರಾಮಗಳಿಂದ ಮತ ಪಡೆದು ಶಾಸಕರಾಗಿ, ಅರಣ್ಯ ಸಚಿವರಾಗಿ, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಆನಂದ್ಸಿಂಗ್ ಅವರು ಮಾತ್ರ ಭ್ರಷ್ಟ ಅಧಿಕಾರಿಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಧರ್ಮಸಾಗರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದಲ್ಲಿ ಎರಡು ಹೆಚ್ಚುವರಿ ಕೊಠಡಿಗಳ ಅನುದಾನ ಬಿಡುಗಡೆಯಾಗಿದ್ದು, ಅವುಗಳನ್ನು ಸ್ಮಶಾನ ಮತ್ತು ಸಾಮೂಹಿಕ ಶೌಚಾಲಯ ಪಕ್ಕದಲ್ಲಿ ಕಟ್ಟಲು ಗ್ರಾಮ ಪಂಚಾಯಿತಿ ಮತ್ತು ಪಂಚಾಯತ್ರಾಜ್ ಇಂಜಿನೀಯರಿಂಗ್ ಇಲಾಖೆಗಳು ಹವಣಿಸುತ್ತಿವೆ. ದುರಂತವೆಂದರೆ, ಇಂಥ ಅಧಿಕಾರಿಗಳಿಗೆ ಶಾಸಕ ಆನಂದ್ಸಿಂಗ್ ಅವರೇ ಪ್ರೋತ್ಸಾಹಿಸುತ್ತಿದ್ದಾರೆ. ಸ್ಮಶಾನ ಪಕ್ಕದಲ್ಲಿ ಶಾಲೆಯ ಕಟ್ಟಡ ನಿಮರ್ಿಸಿದರೆ ಮಕ್ಕಳು ಭಯದಿಂದ ಮತ್ತು ಶೌಚಾಲಯದ ವಾಸನೆಯಿಂದ ನರಳಬೇಕಾಗುತ್ತದೆ. ಇದಕ್ಕೆ ನಮ್ಮ ಪಕ್ಷ ಅವಕಾಶ ಮಾಡಿಕೊಡುವುದಿಲ್ಲ ಎಂದು ಕಮಲಾಪುರ ಹೋಬಳಿ ಘಟಕದ ಕಾಯರ್ಾಧ್ಯಕ್ಷ ಮಂಜುನಾಥ ಹಿರೇಮಠ ಹೇಳಿದರು.
ಧರ್ಮಸಾಗರ ಗ್ರಾಮದ ಜನಗಳು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದರೆ ಸರಿಯಾಗಿ ಕೂಲಿ ಪಾವತಿಸುವುದಿಲ್ಲ. ನಿಯಮಾನುಸಾರ 100 ದಿನಗಳ ಕೆಲಸ ಕೊಡುವುದಿಲ್ಲ. ಕೊರೋನಾ ಆವರಿಸಿದಂಥ ಈ ದುದರ್ಿನಗಳಲ್ಲಿ ನಮ್ಮ ಜನಗಳು ಬದುಕು ದೂಡುವುದು ದುಸ್ತರವಾಗಿದೆ ಎಂದು ಧರ್ಮಸಾಗರ ಗ್ರಾಮ ಘಟಕದ ಅಧ್ಯಕ್ಷ ಎನ್. ರಾಜಕುಮಾರ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಹೊಸಪೇಟೆ ತಾಲೂಕು ಪ್ರಧಾನ ಕಾರ್ಯದಶರ್ಿ ದಲ್ಲಾಳಿ ಹುಸೇನ್ ಮೌಲ, ಸಂಘಟನಾ ಕಾರ್ಯದಶರ್ಿ ಆನಂದ್ ಚಲುವಾದಿ, ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ಹೆಚ್. ದಿನೇಶ, ರೈತ ಮೋಚರ್ಾದ ಅಧ್ಯಕ್ಷರು ಎನ್. ತಿಮ್ಮರೆಡ್ಡಿ, ಪಂಪಾರೆಡ್ಡಿ, ಷಣ್ಮುಖರೆಡ್ಡಿ, ಎನ್. ವೀರೇಶ, ಎನ್. ಬಸವರಾಜ, ಜಿ. ಬಸವನಗೌಡ, ಎನ್. ಕುಮಾರಸ್ವಾಮಿ, ಹಡಪದ ಗುರು, ಎನ್. ಮಂಜುನಾಥ, ಹರಿಜನ ಮಹೇಶ, ಹರಿಜನ ಮಾರೇಶ ಮುಂತಾದವರು ಭಾಗವಹಿಸಿದ್ದರು.