ರಾಣೆಬೆನ್ನೂರ

ಕಾರ್ಮಿಕರಿಗೆ ಅಗತ್ಯ ಸೌಲಭ್ಯಕ್ಕೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ

ಕಾರ್ಮಿಕರಿಗೆ ಅಗತ್ಯ ಸೌಲಭ್ಯಕ್ಕೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ

ರಾಣೆಬೆನ್ನೂರು 11 ನಗರ ಹೊರವಲಯದ ಮೇಘಾ ಮಾರುಕಟ್ಟೆಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ದಿನನಿತ್ಯವೋ 50ಕ್ಕೂ ಹೆಚ್ಚು ಕಾರ್ಮಿಕರು ಹಮಾಲಿ. ಕಾರ್ಯದಲ್ಲಿ ನಿತ್ಯವೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಇವರು ಇದುವರೆಗೂ  ಪಿಎಫ್‌. ಇಎಸ್‌ಐ ಸೌಲಭ್ಯಗಳಿಂದ ವಂಚಿತಾರಾಗಿದ್ದಾರೆ. 2014ರಿಂದ ಇವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. 2014 ರಿಂದ  2022.ರ ವರೆಗೆ ಕೆಲಸ ಮಾಡಿದ ಹಮಾಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಸೌಲತ್ತುಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ಕಳೆದ ಎರಡು ವರ್ಷಗಳಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸುತ್ತಾ ಬರಲಾಗಿದೆ  ಆದರೆ ಸಂಬಂಧಿಸಿದ ಯಾರು ತಮ್ಮ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಕಾರ್ಮಿಕರು ಬಲವಾಗಿ ಆರೋಪಿಸಿದರು.  ನ್ಯಾಯ ಸಿಗುತಿಲ್ಲಾ ಕಾರ್ಮಿಕ ಕಾಯ್ದೆ ಉಲ್ಲಂಘನೆ ಮಾಡಿರುವ ಖಖ ಮನ್ನಂಗಿ ಗುತ್ತೆಗೆದಾರ ವಿರೋದ್ದ ಕಾರ್ಮಿಕ ಇಲಾಖೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು ಮತ್ತು ಮೂಲಭೂತ ಸೌಕರ್ಯಗಳನ್ನ ಕಾರ್ಮಿಕರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.  

ಹೋರಾಟದ ಕಾವು ಏರುತ್ತಿರುವುದನ್ನು ಮನ ಗಂಡ ದಾವಣಗೆರೆಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮ.ಪ್ರಾದೇಶಿಕ ವ್ಯವಸ್ಥಾಪಕ ಎನ್‌.. ಎಮ್‌. ಬಸವರಾಜ್ ಅವರಿಗೆ ಮುಂಚೂಣಿ ನಾಯಕ ಜಗದೀಶ್ ಕೆರೋಡಿ ನೇತೃತ್ವದಲ್ಲಿ ಪುನಃ ಮನವಿ ಸಲ್ಲಿಸಲಾಯಿತು. ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಅವರ ತವರು ಜಿಲ್ಲೆಯಲ್ಲಿ   ಉಗ್ರಾಗಳಲ್ಲಿ ಮೊಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಇನ್ನಾ ದರು  ಕ್ರಮ ಕೈಗೊಂಡು ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಇಲ್ಲವಾದಲ್ಲಿ ಡಿ.1,2022ರಂದು, ಉಗ್ರಾಣದ ಮುಂಭಾಗ ರಾಷ್ಟ್ರೀಯ ಹೆದ್ದಾರಿ ತಡೆದು , ಬಂಧ ಗೋಳಿಸಿ, ಅನಿದಿರ್ಷ್ಠಾವಧಿ  1.12.2022. ರಂದು ಕರ್ನಾಟಕ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ. 

ರಾಜ್ಯ ಉಗ್ರಾಣ ನಿಗಮದ ಮುಂಬಾಗ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ನ್ಯಾಯ ಸಿಗುವ ವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ. ಮುಂಚೋಣಿಯಲ್ಲಿ  ರವೀಂದ್ರ ಗೌಡ ಪಾಟೀಲ್, ಹಮಾ ಲರ ಸಂಘದ ಅಧ್ಯಕ್ಷ ಹನುಮಂತಪ್ಪ ಹಲವಾಗಲ, ಜಗದೀಶ್ ಕೆರೋಡಿ, ವಿರುಪಾಕ್ಷಪ್ಪ ಬಂಕಾಪುರ್, ಮಾಲತೇಶ ಹಲಗೇರಿ, ನಾಗಪ್ಪ ಮೇಡ್ಲೆರಿ, ಕೆಂಚಪ್ಪ ಬುಡ್ಡಳ್ಳವರ್, ಮಹೇಶ್ ಮೇಗಳಮನಿ, ಬಸವರಾಜ ಹೆಬ್ಬಾಳ, ನಾಗರಾಜ ಜ್ಯೋತಿ, ಮಂಜು ಛತ್ರ, ಮಂಜು ಗಂಗಮ್ಮನವರ್, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಕಾರ್ಮಿಕರು 


ಸುದ್ದಿ ಓದಿ