ಆಲಮಟ್ಟಿ ಯಾದಗಿರಿ ರೈಲು ಮಾರ್ಗ ಪ್ರಾರಂಭಿಸಲು ಒತ್ತಾಯ
ಮುದ್ದೇಬಿಹಾಳ 28: ಆಲಮಟ್ಟಿ ಮುದ್ದೇಬಿಹಾಳ ಮಾರ್ಗವಾಗಿ ಯಾದಗಿರಿ ರೈಲು ಸಂಚಾರ ಪ್ರಾರಂಭಿಸುವ ಮೂಲಕ ಈ ಭಾಗದ ರೈತರಿಗೆ ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಬಿಜೆಪಿ ನಿಕಟಪೂರ್ವ ತಾಲೂಕಾ ಪ್ರದಾನ ಕಾರ್ಯದರ್ಶಿ ಸಿದ್ದು ಹೆಬ್ಬಾಳ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಆಲಮಟ್ಟಿ ಯಿಂದ ಮುದ್ದೇಬಿಹಾಳ ಮಾರ್ಗವಾಗಿ ರೈಲು ಪ್ರಾರಂಭಿಸಲು ಅಂದಿನ ಬ್ರೀಟಿಷರು ರೈಲು ಮಾರ್ಗದ ನೀಲನಕ್ಷೇ ತಯಾರಿಸಿದ್ದಲ್ಲದೇ ಕಾಮಗಾರಿ ನಡೆಸಿದ್ದರೂ ಆದರೇ ಕಾಮಗಾರಿ ಪೂರ್ಣಗೊಳಿಸದೇ ಅರ್ಧಮರ್ಧಕ್ಕೆ ನಿಲ್ಲಿಸಿದ್ದ ಆಲಮಟ್ಟಿ ಯಾದಗಿರಿ ರೈಲು ಮಾರ್ಗ ಇಲ್ಲಿಯವರಗೆ ಈ ಕಾಮಗಾರಿ ಪ್ರಾರಂಭಿಸಿ ರೈಲು ಸಂಚಾರ ಪ್ರಾರಂಭಿಸಲು ಇಚ್ಚಾಸಕ್ತಿ ಕೊರತೆಯ ಕಾರಣದಿಂದಾಗಿ ಈ ಹಿಂದಿನ ಸರಕಾರಕ್ಕೆ ಸಾಧ್ಯವಾಗಿಲ್ಲ.
ಈ ಬಗ್ಗೆ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮಗಳ ತಾಲೂಕುಗಳ ಸಂಘ ಸಂಸ್ಥೆಗಳು ಅನೇಕ ಬಾರಿ ಹೋರಾಟ ನಡೆಸಿ ಸರಕಾರದ ಗಮನ ಸೆಳೆಯವ ಕಾರ್ಯ ಮಾಡಿದರೂ ಯಾವೂದೇ ಪ್ರಯೋಜನವಾಗಿಲ್ಲ. ಆಲಮಟ್ಟಿ ಯಾದಗಿರಿ ರೈಲು ಪ್ರಾರಂಭಿಸುವುದರಿಂದ ಜನ ಸಂಚಾರ ಮಾತ್ರವಲ್ಲದೇ ಸರಕು ಸಾಗಣಿಕೆಯಿಂದ ಸರಕಾರಕ್ಕೆ ನೂರಾರು ಕೋಟಿ ಆದಾಯ ಗಳಿಸಬಹುದಾಗಿದೆ ಜೊತಗೆ ಕೈಗಾರಿಕೊದ್ಯಮ ಪ್ರಗತಿ ಹೆಚ್ಚಾಗುವ ಸಾಧ್ಯತೆ ಇದೇ ಸಧ್ಯ ದೇಶದಲ್ಲಿ ನಮ್ಮದೇ ಬಿಜೆಪಿ ಸರಕಾರ ಅಧಿಕಾರದಲ್ಲಿದೆ ಮುಂಬರುವ ಲೋಕಸಭಾ ಚುನಾವಣೆ ಸಮೀಸುತ್ತಿರುವ ಹಿನ್ನೇಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿಹಾಕಲು ಈ ಭಾಗದ ಬಹುತೇಕ ರೈತರ, ಸಂಘ ಸಂಸ್ಥೆಗಳ ಮುಖಂಡರ, ಗಣ್ಯ ಉದ್ಯಮಿಗಳ, ವಿವಿಧ ಕನ್ನಡಪರ ಸಂಘಟನೆಗಳ ಬಹುಮುಖ್ಯ ಬೇಡಿಕೆ ಇಡೇರಿಸಿದಲ್ಲಿ ಈ ಮಾರ್ಗದ ವ್ಯಾಪ್ತಿಗೆ ಬರುವ ಮೂರಾ್ನಲ್ಕು ಜಿಲ್ಲೆಗಳ ಜನರು ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆ ಇದೇ. ಸಧ್ಯ ಈಗೀರುವ ಲೋಕ ಸಭಾ ಸದಸ್ಯರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ಬಜೆಟ್ ನಲ್ಲಿ ಆಲಮಟ್ಟಿ ಯಾದಗಿರಿ ರೈಲು ಮಾರ್ಗ ಪ್ರಾರಂಭಿಸಲು ಪ್ರತ್ಯೇಕ ಅನುದಾನ ಬಿಡುಗಡೆಗೊಳಿಸಿ ಈ ಭಾಗದ ಜನರು ಹೋರಾಟಗಾರರ ಬೇಡಿಕೆ ಇಡೇರಿಸುವಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಇದು ಇತಿಹಾಸಕ್ಕೆ ಸಾಕ್ಷೀಯಾಗಲಿದೆ ಎಂದರು.