ಬಳ್ಳಾರಿ

ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು 3,000 ರೂಗಳಿಗೆ ಹೆಚ್ಚಿಸಲು ಒತ್ತಾಯ

ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು 3,000 ರೂಗಳಿಗೆ ಹೆಚ್ಚಿಸಲು ಒತ್ತಾಯ

ಬಳ್ಳಾರಿ : ಜೂ 14ರಂದು ದೇವದಾಸಿ ಮಹಿಳೆಯರು ಮಾಸಿಕ ಸಹಾಯ ಧನವನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿಯ ಮುಖಾಂತರ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.  ಮೊದಲನೆಯದಾಗಿ, ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಮತ್ತೊಮ್ಮೆ ಆಯ್ಕೆಯಾಗಿರುವ ತಮಗೂ ಹಾಗೂ ತಮ್ಮ ಸಹೋದ್ಯೋಗಿ ಮಂತ್ರಿ ಮಂಡಲದ ಎಲ್ಲ ಸದಸ್ಯರಿಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಘಟಕದ ಪರವಾಗಿ ಹೃತ್ಪೂರ್ವಕ ಶುಭಾಶಯಗಳು ತಿಳಿಸಿದರು.ಕಳೆದ ಆರೇಳು ವರ್ಷಗಳಲ್ಲಿ ಅಗತ್ಯ ವಸ್ತುಗಳ ತೀವ್ರತರವಾದ ಬೆಲೆ ಏರಿಕೆ, ಬರಗಾಲ ಹಾಗು ಪ್ರವಾಹಗಳಿಂದ, ಕರೋನಾ ಸಂಕಷ್ಟದಿಂದ ಕರ್ನಾಟಕ ರಾಜ್ಯ ಮತ್ತು ದೇವದಾಸಿ ಮಹಿಳೆಯರು ಅವರ ಕುಟುಂಬದ ಸದಸ್ಯರು ನಲುಗಿ ಹೋಗಿರುವುದು ತಮಗೆ ತಮ್ಮ ಸಹೋದ್ಯೋಗಿಗಳಿಗೆ ತಿಳಿದ ವಿಚಾರವಾಗಿದೆ. 

ಈ ಆರೇಳು ವರ್ಷಗಳಲ್ಲಿ ನಮ್ಮಗಳ ಮಾಸಿಕ ಸಹಾಯಧನವನ್ನು ಅಥವಾ ಪಿಂಚಣಿಯನ್ನು 1500 ರೂಗಳಿಂದ ಕನಿಷ್ಟ 3,000 ರೂಗಳಿಗೆ ಹೆಚ್ಚಿಸುವಂತೆ ತಾವು ಹಿಂದೆ ಮುಖ್ಯ ಮಂತ್ರಿಯಾಗಿದ್ದಲೂ ಮತ್ತು ಆನಂತರ ಬಂದ  ಕುಮಾರ ಸ್ವಾಮಿಯವರ,  ಯಡೆಯೂರ​‍್ಪರವರ ನಂತರ ಬಸವರಾಜ ಬೊಮ್ಮಾಯಿಯವರುಗಳು ಮುಖ್ಯಮಂತ್ರಿಗಳಾಗಿದ್ದಲೂ ಒತ್ತಾಯಿಸಿ ಮನವಿ ಸಲ್ಲಿಸಿದೆವು . ಮಾತುಕತೆ ನಡೆಸಿದೆವು ಮತ್ತು ಚಳುವಳಿಯನ್ನು ಸಂಘಟಿಸಿ ಒತ್ತಾಯಿಸಿದೆವು. ತಾವುಗಳು ಸೇರಿದಂತೆ ಸಹಾಯಧನವನ್ನು ಹೆಚ್ಚಿಸುವುದಾಗಿ ಹೇಳಿದಿರಿ ಆದರೇ ಹೆಚ್ಚಳವನ್ನು ಮಾಡಲೇ ಇಲ್ಲ.  

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ ಸುಮಾರು 30,000 ಕೋಟಿ ರೂಗಳಷ್ಠು ಅನುದಾನ ಬಿಡುಗಡೆಯಾಗುತ್ತಿದ್ದರೂ ನಮ್ಮ ಗಳ ಅನುದಾನವನ್ನು ಯಾಕೆ ಹಿಚ್ಚಿಸುತ್ತಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ.ಈಗಲಾದರೂ ಮತ್ತು ನಮ್ಮ ಅನುದಾನ ಹೆಚ್ಚಿಸಿಯಾದರೂ ನಮ್ಮಗಳ ಮಾಸಿಕ ಸಹಾಯಧನವನ್ನು ಬೆಲೆ ಏರಿಕೆಯಂತೆ ಕನಿಷ್ಟ 5,000 ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಮರಳಿ ಒತ್ತಾಯಿಸುವೆವು !ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಗಣತಿ ಪಟ್ಟಿಯಿಂದ ಹೊರಗಿರುವ ಮಹಿಳೆಯರ ಸೇರೆ​‍್ಡಗೆ ಅನಗತ್ಯ ತಕರಾರು ತೆಗೆಯಲಾಗುತ್ತಿದೆ. 

 ಅಪಮಾನಿತ ಮತ್ತು ದಮನಿತ ಮಕ್ಕಳ ಅದರಲ್ಲೂ ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿ ಮಾಡುವ ಕಾರ್ಯವನ್ನು ಕೈಗೊಳ್ಳದೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಬೆಳೆಯಲು ಬಿಡಲಾಗುತ್ತಿದೆ.ಹಿಂದಿನ ಬಿಜೆಪಿ ಸರಕಾರ ನಮಗೆ ನೀಡುತ್ತಿದ್ದ ಸಾಲ ಸೌಲಭ್ಯವನ್ನು ಕಡಿತ ಮಾಡಿ ವಂಚಿಸಿದೆ. ಮಾತ್ರವಲ್ಲಾ ಮೂರು ಜನ ವಿರೋಧಿ ಕೃಷಿ ಕಾಯ್ದೆಗಳು ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದಲಿತರು ಹಾಗು ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರು ಬದುಕುವ ಹಾಗೂ ಆಹಾರದ ಮತ್ತು ಶಿಕ್ಷಣದ ಹಕ್ಕಿನ ಮೇಲೆ ಗಂಭೀರ ಧಾಳಿಯನ್ನು ನಡೆಸಿದೆ. ಇವುಗಳನ್ನೆಲ್ಲಾ ತಾವು ವಾಪಾಸು ಪಡೆಯುವದು ಅವಶ್ಯವಿದೆ ಎಂದು ಮಾತನಾಡಿದರು.  

ಯು ಬಸವರಾಜ್, ತಿಮ್ಮಕ್ಕ, ಹನುಮಂತಿ, ಸುಂಕಮ್ಮ, ಗಾದೆಮ್ಮ, ರೇಣುಕಮ್ಮ, ಹನುಮಂತಿ ಭೀಮಕ್ಕ, ಜಡಮ್ಮ, ಇತರರು  ಆಗಮಿಸಿದ್ದರು. ಹಕ್ಕೊತ್ತಾಯಗಳು :1) ಎಲ್ಲಾ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು 5,000 ರೂಗಳಿಗೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು.2) ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಗಣತಿ ಪಟ್ಟಿಯಲ್ಲಿ ಸೇರೆ​‍್ಡ ಮಾಡಿ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು.3) ದೇವದಾಸಿ ಮಹಿಳೆಯರ ಮಕ್ಕಳ ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ ಗಣತಿ ಮಾಡಿ ಅವರಿಗೂ ಪುನರ್ವಸತಿ ಕಲ್ಪಿಸಬೇಕು.4) ಎಲ್ಲಾ ದೇವದಾಸಿ ಮಹಿಳೆಯರ ಮಕ್ಕಳು ಅಂತರ್ಜಾತಿಯಲ್ಲಾಗಲೀ ಮತ್ತು ಸಜಾತಿಯಲ್ಲಾಗಲೀ ಹಾಗೂ ದೇವದಾಸಿ ಮಹಿಳೆಯರ ಕುಟುಂಬಗಳ ಸದಸ್ಯರ ನಡುವೆಯಾಗಲೀ ಮದುವೆಯಾದಲ್ಲಿ ಪ್ರೋತ್ಸಾಹ ಧನವನ್ನು 05 ಲಕ್ಷ ರೂ ನೀಡಬೇಕು. ಇವರ ಮದುವೆಯ ವಿಚಾರದಲ್ಲಿ ಷರತ್ತುಗಳಿರಬಾರದು 


ಸುದ್ದಿ ಓದಿ