ಸಲ್ಮಾನ್ ಖುರ್ಷಿದ ವಿವಾದಿತ ಪುಸ್ತಕ ನಿಷೇಧಿಸಲು ಆಗ್ರಹ
ಬೆಂಗಳೂರು,ನ.15: ಕೋಲಾರದಲ್ಲಿ ಶ್ರೀ ದತ್ತ ಭಕ್ತರ ಮೇಲೆ ಜಿಹಾದಿಗಳ ಆಕ್ರಮಣ ಖಂಡಿಸಿ ಮತ್ತು ಸಲ್ಮಾನ್ ಖುರ್ಷಿದ ವಿವಾದಿತ ಪುಸ್ತಕ ನಿಷೇಧ ಮಾಡಲು ಆಗ್ರಹಿಸಿದೆ.
ಕೋಲಾರದಲ್ಲಿ ದತ್ತ ಭಕ್ತಾದಿಗಳ ಮೇಲೆ ಮತಾಂದರ ಆಕ್ರಮಣ ಖಂಡಿಸಿ ಮತ್ತು ಸಲ್ಮಾನ್ ಖುರ್ಷಿದ್ ಇವರು ಹಿಂದೂತ್ವವನ್ನು ಇಸ್ಲಾಮಿಕ್ ಭಯೋತ್ಪಾದನೆಗೆ ಹೋಲಿಕೆ ಮಾಡಿದ ವಿವಾಧಿತ ಪುಸ್ತಕ ನಿಷೇಧ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಇವರಿಗೆ ಮನವಿಯನ್ನು ಬೆಂಗಳೂರು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನೀಡಲಾಯಿತು.
ಮನವಿಯಲ್ಲಿ ಕೋಲಾರದಲ್ಲಿ ದತ್ತ ಭಕ್ತಾದಿಗಳ ಮೇಲೆ ನೂರಾರು ಮತಾಂದರು ಮಾರಣಾಂತಿಕ ಹಲ್ಲೆ ಒಂದು ವ್ಯವಸ್ಥಿತ ಷಡ್ಯಂತ್ರ್ಯ ವಾಗಿದೆ. ಗೋದ್ರಾ ಮಾದರಿಯಲ್ಲಿ ದತ್ತ ಭಕ್ತರ ನರಮೇಧ ಮಾಡುವ ಕುತಂತ್ರವಾಗಿತ್ತು. ಕೂಡಲೇ ಎಲ್ಲಾ ಅಪರಾಧಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು.
ಮತ್ತು ಖುರ್ಷಿದ್ ನಿಜವಾಗಿಯೂ ಹಿಂದೂ ಧರ್ಮದ ಮೇಲೆ ಪ್ರೀತಿ ಇದ್ದರೆ, ಸಲ್ಮಾನ್ ಖುರ್ಷಿದ್ ಅವರಿಗೆ ತಮ್ಮ ಪುಸ್ತಕವನ್ನು ಹಿಂಪಡೆಯಬೇಕು ಮತ್ತು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಲು ಹೇಳಬೇಕು. ಭಾರತದಲ್ಲಿ ಡಾ-ವಿನ್ಸಿ ಕೋಡ್, ಸೈಟಾನಿಕ್ ವರ್ಸಸ್ ಈ ಇತರ ಧರ್ಮದವರ ಪುಸ್ತಕಗಳನ್ನು ನಿಷೇಧಿಸಬಹುದಾದರೆ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ‘ಸನ್‌ರೈಸ್ ಓವರ್ ಅಯೋಧ್ಯಾ ನೇಷನ್‌ಹುಡ್ ಇನ್ ಅವರ್ ಟೈಮ್ಸ್’ ಸಹ ನಿಷೇಧಿಸಲು ಆಗ್ರಹ ಮಾಡಲಾಯಿತು.