ಬಳ್ಳಾರಿ

ವೈದ್ಯಕೀಯ ವಿದ್ಯಾರ್ಥಿ ಡಾ.ದರ್ಶನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ- ಗೊಲ್ಲರ ಸಂಘ ಒತ್ತಾಯ

ವೈದ್ಯಕೀಯ ವಿದ್ಯಾರ್ಥಿ ಡಾ.ದರ್ಶನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ- ಗೊಲ್ಲರ ಸಂಘ ಒತ್ತಾಯ

ಬಳ್ಳಾರಿ  : 17 ರಂದು ಕೊಲಾರ ಜಿಲ್ಲೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ.ದರ್ಶಿನಿ ಸತ್ಯನಾರಾಯಣ ಸಾವಿಗೆ ಕಾರಣರಾದ ಎಂ.ವಿ.ಜೆ.ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ, ಡಾ.ಮಹೇಶ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಶಿಕ್ಷೆಗೆ ಒಳಪಡಿಸಬೇಕು ಹಾಗೂ ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಪದಾಧಿಕಾರಿಗಳು, ಯಾದವ ಸಮುದಾಯದ ಸಾವಿರಾರು ಜನರು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದ ಬಳಿ ಜಮಾಯಿಸಿದ ಯಾದವ ಸಮುದಾಯದ ಸಾವಿರಾರು ಜನರು, ಡಾ.ದರ್ಶಿನಿ ಹತ್ಯೆ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಮುನ್ಸಿಪಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ವಿದ್ಯಾರ್ಥಿನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗೊಲ್ಲರ ಸಂಘದ ಜಿಲ್ಲಾ ಸಮೀತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ಗೊಲ್ಲರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಪಿ.ಗಾದೆಪ್ಪ ಅವರು ಮಾತನಾಡಿ, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ.ದರ್ಶಿನಿ ಸತ್ಯನಾರಾಯಣ ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಈ ಘಟನೆ ಇಡೀ ಸಮಾಜವೇ ತಲೆ ತಲೆತಗ್ಗಿಸುವಂತಾಗಿದೆ, ಕೋಲಾರದ ಎಂ.ವಿ.ಜೆ.ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಹಾಗೂ ಡಾ.ಮಹೇಶ್ ಅವರೇ ಈ ವಿದ್ಯಾರ್ಥಿ ಡಾ.ದರ್ಶಿನಿ ಸಾವಿಗೆ ಕಾರಣ, ಕೂಡಲೇ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಶಿಕ್ಷೆಗೆ ಒಳಪಡಿಸಬೇಕು, ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಡಾ.ದರ್ಶಿನಿ ಅವರು ಸ್ನಾತಕೋತ್ತರ ಪದವಿಗೆ ಸರ್ಕಾರಿ ಕೋಟಾದಡಿ ಎಂ.ವಿ.ಜೆ.ಕಾಲೇಜಿನಲ್ಲಿ ಎಂ.ಡಿ.ಪ್ರವೇಶ  ಪಡದಿದ್ದು, ಹಿಂದುಳಿದ ಯಾದವ ಸಮುದಾಯಕ್ಕೆ ಸೇರಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಗೆ ಸರ್ಕಾರಿ ಕೊಟಾದಡಿ ಪ್ರವೇಶ ಪಡೆದಿದ್ದರೂ ಹೆಚ್ಚುವರಿ ಹಣ ಪಡೆಯಲು ದೌರ್ಜನ್ಯ ಮಾಡಿದ್ದಾರೆ. 

ಈ ಕುರಿತು ಆಡಳಿತ ಮಂಡಳಿಯವರು ವಿದ್ಯಾರ್ಥಿನಿಗೆ ಸಾಕಷ್ಟು ನಾನಾ ರೀತಿಯ ಕಿರುಕುಳ ನೀಡಿದ್ದಾರೆ, ಈ ಹಿನ್ನೆಲೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನಂದ ಕೋಗುಲ ಶಾಲೆಯ ಅದ್ಯಕ್ಷ ಬಿ.ರಾಘವೇಂದ್ರ ಯಾದವ್, ಗೊಲ್ಲರ ಸಂಘದ ಜಂಟಿ ಕಾರ್ಯದರ್ಶಿ ಬಿ.ಗೋಪಾಲ್, ಸೋಮಪ್ಪ ಯಾದವ್, ಗಿರಿ ಮಲ್ಲಪ್ಪ, ಚುದಾನಂದ ಯಾದವ್, ನಾಗಪ್ಪ ಯಾದವ್, ತಿಮ್ಮಪ್ಪ  ಯಾದವ್, ಆನಂದ್ ಯಾದವ್, ಬಸವರೆಡ್ಡಿ ಯಾದವ್, ಎರ್ರಿಸ್ವಾಮೀ ಮೆಟ್ರಿ, ರಮೇಶ್ ಗುಗ್ಗರಹಟ್ಟಿ, ಪ್ರಕಾಶ್ ಪೂಜಾರ್, ನ್ಯಾಯವಾದಿ ವೆಂಕಟೇಶ ಯಾದವ್ ಸೇರಿದಂತೆ ಇತರರಿದ್ದರು. 

ತಂದೆಯನ್ನು ಕಳೆದುಕೊಂಡ ಬಡ ವಿದ್ಯಾರ್ಥಿನಿ ಡಾ.ದರ್ಶಿನಿ ಸತ್ಯನಾರಾಯಣ ಅವರು, 7ಲಕ್ಷ ರೂ.ಹಣ ಪಾವತಿ ಮಾಡಿದ್ದರೂ, ಎಂ.ವಿ.ಜೆ.ಕಾಲೇಜು  ಆಡಳಿತ ಮಂಡಳಿ ಹಾಗೂ ಡಾ.ಮಹೇಶ್ ಅವರು ಹೆಚ್ಚುವರಿ ಹಣಕ್ಕೆ ವಿದ್ಯಾರ್ಥಿ ಗೆ ಕಿರುಕುಳ ನೀಡಿದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಸಾವಿಗೆ ಕಾರಣದವರು ಎಷ್ಟೇ ಬಲಿಷ್ಟರಾಗಿದ್ದರೂ ಕಠಿಣ ಶಿಕ್ಷೆಯಾಗಬೇಕು, ನಿರ್ಲಕ್ಷ್ಯ ವಹಿಸಿದರೇ ಹೋರಾಟದ ಸ್ವರೂಪ ಬದಲಾಗಲಿದೆ.

ಪಿ.ಗಾದೆಪ್ಪ

ಅಧ್ಯಕ್ಷ ಗೊಲ್ಲರ ಸಂಘ ಬಳ್ಳಾರಿ.

ಸುದ್ದಿ ಓದಿ