ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ.ಮಹಿಳಾ ಘೋಷಣೆಗೆ ಆಗ್ರಹ
ಬೈಲಹೊಂಗಲ 22: ಪಟ್ಟಣದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಎಸ್.ಸಿ.ಮಹಿಳಾ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಅಂಬೇಡ್ಕರ ಯುವ ಸೇನೆಯ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ ಮೂಲಕ ರಾಜ್ಯ ಚುನಾವಣಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸುಮಾರು 10 ವರ್ಷಗಳಿಂದ ಮಹಿಳಾ ಮೀಸಲಾತಿಯನ್ನು ಚುನಾವಣಾಧಿಕಾರಿಗಳು ಘೋಷಣೆ ಮಾಡಿಲ್ಲ. ರಾಜ್ಯ ಚುನಾವಣಾ ಆಯೋಗ ಶೀಘ್ರವೇ ದಲಿತ ಸಮಾಜದ ಏಳ್ಗೆಗಾಗಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಘೋಷಣೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘಟನೆ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಬಾಗ, ಮಾರುತಿ ಕೊಂಡೂರ, ಸುನೀಲ ಹಲಗಿ, ರಾಮು ಕಳಮಕರ, ರಾಘವೇಂದ್ರ ಕ್ವಾಟಿ, ಮಂಜುನಾಥ ಕಡೇಮನಿ, ಈರಣ್ಣ ರಾಯಬಾಗ, ರಮೇಶ ಕಾವಳ, ಗೋಪಿ ಪವಾರ, ದ್ಯಾಮಣ್ಣ ಕಡೇಮನಿ, ಮಂಜುನಾಥ ರಾಯಬಾಗ, ರಫೀಕ ಅನ್ಸಾರಿ, ಶಿವಾನಂದ ದಳವಾಯಿ, ನಾರಾಯಣ ಕಳಮಕರ, ಅಜೀತ ಕಾವಳೆ, ಸಂತರಾಮ ಕಾವಳೆ ಅನೇಕರು ಇದ್ದರು.