ಕಂಪ್ಲಿ

ಸಾಲ ಮನ್ನಾ ಮಾಡುವ ಜೊತೆಗೆ ಎಕರೆಗೆ 30 ಸಾವಿರ ಪರಿಹಾರ ನೀಡುವಂತೆ ಆಗ್ರಹ

ಸಾಲ ಮನ್ನಾ ಮಾಡುವ ಜೊತೆಗೆ ಎಕರೆಗೆ 30 ಸಾವಿರ ಪರಿಹಾರ ನೀಡುವಂತೆ ಆಗ್ರಹ
Demand for loan waivers and compensation of ₹30,000 per acre

ಲೋಕದರ್ಶನ ವರದಿ 

ಕಂಪ್ಲಿ  23: ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೈತರು, ಬಡ ಜನರು ರೋಸಿ ಹೋಗಿದ್ದು, ಬರುವ ದಿನದಲ್ಲಿ ತಕ್ಕಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಗುಡುಗಿದರು. ಪಟ್ಟಣದ ಅತಿಥಿ ಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಪ್ಲಿ ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರ ಆವರಿಸಿದ್ದು, ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ನೆಪಕ್ಕೆ ಮಾತ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ ಹೊರತು ಪರಿಹಾರ ನೀಡಲು ಮುಂದಾಗಿಲ್ಲ.

ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳ ಪ್ರತಿ ರೈತರ ಎಕರೆಗೆ ಸುಮಾರು 30 ಸಾವಿರ ರೂ.ಗಳ ಪರಿಹಾರ ನೀಡಬೇಕು. ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರೀ ರೈತರ ಜಪ ಮಾಡುವುದಲ್ಲ. ಬದಲಾಗಿ ಅವರ ಕಷ್ಟದಲ್ಲಿ ಭಾಗಿಯಾಗಿ ಪರಿಹಾರ ನೀಡಿದಾಗ ಮಾತ್ರ ರೈತರ ಬದುಕು ಉತ್ತಮವಾಗಿರುತ್ತದೆ ಎಂದರು. ಕಂಪ್ಲಿಯಲ್ಲಿ ನಿರ್ಮಿಸಿದ ಮಿನಿವಿಧಾನಸೌಧವು ಕಳಪೆಯಿಂದ ಕೂಡಿದೆ. ಇಲ್ಲಿನ ಅತಿಥಿ ಗೃಹದ ಬಳಿಯಲ್ಲಿ ಅತಿಥಿ ಗೃಹದ ನೂತನ ಕಟ್ಟಡ ನಿರ್ಮಿಸಿ, ಕಾಮಗಾರಿ ಮುಗಿದು, ವರ್ಷಗಳೇ ಕಳೆದರೂ, ಉದ್ಘಾಟನೆ ಭಾಗ್ಯ ಇಲ್ಲದಂತಾಗಿದೆ.

ಮತ್ತು ಬಹು ವರ್ಷದ ಬೇಡಿಕೆಯಾಗಿರುವ ಕಂಪ್ಲಿ ಹೊಸ ಸೇತುವೆಗೆ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡುತ್ತಿಲ್ಲ. ನೂತನ ಸೇತುವೆಗೆ ಅಡಿಗಲ್ಲು ಹಾಕಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಘಟಕ ಅಧ್ಯಕ್ಷ ಹೊನ್ನೂರಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ವಸಂತಕುಮಾರ, ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹೆಚ್‌.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಜಗದೀಶ ಪೂಜಾರ, ನಗರ ಘಟಕ ಅಧ್ಯಕ್ಷ ಇರ್ಫಾನ್ ಗುತ್ತಿ, ಮುಖಂಡರಾದ ಮಂಜುನಾಥ ಕುಕನೂರು, ಹಳ್ಳಿಗುಡಿ ಹನುಮಂತಪ್ಪ, ಬೇವೂರು ಈರಣ್ಣ, ವಿರುಪಾಕ್ಷಿ, ನಿಂಗಪ್ಪ, ವಿರೇಶ, ರಾಜೇಶ, ಸಂಗೇಶ, ಕೊಂಡಯ್ಯ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.  


ಸುದ್ದಿ ಓದಿ