ನೆಲಜೇರಿ ಗ್ರಾ.ಪಂ ಚುನಾವಣೆ ಅಕ್ರಮ ತನಿಖೆಗೆ ಆಗ್ರಹ
ಯಲಬುರ್ಗಾ 21 : ಕುಕನೂರು ತಾಲೂಕಿನ ನೆಲಜೇರಿ ಗ್ರಾಮ ಪಂಚಾಯಿತಿಯಲ್ಲಿ 2015-16ರಿಂದ 2020ರ ವರೆಗೆ ನಡೆದ ಅವ್ಯವಹಾರದ ತನಿಖೆಗೆ ಒತ್ತಾಯಿಸಿ ಗ್ರಾಮದ ಮುಖಂಡರು ಮಂಗಳವಾರ ಕುಕನೂರು ತಾಲೂಕಿನ ನೆಲಜೇರಿ ಗ್ರಾಪಂ ಪಿಡಿಒ ಮೂಲಕ ತಾಲೂಕು ಇಒಗೆ ಮನವಿ ಸಲ್ಲಿಸಿದರು.
ಮುಖಂಡ ವಿರೂಪಾಕ್ಷಗೌಡ ಪಾಟೀಲ ಮಾತನಾಡಿ, ಗ್ರಾಪಂ ಸಿಬ್ಬಂದಿಗೆ ಖರೀದಿಸಲಾದ ಸಮವಸ್ತ್ರ ಹಾಗೂ ಕಂಪ್ಯೂಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ನರೇಗಾಯೋಜನೆ, ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಹಗರಣಗಳಲ್ಲಿ ಗ್ರಾಪಂ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಸಾಕμÀ್ಟು ಹಣ ಕಬಳಿಸಿದ್ದಾರೆ. ಅವುಗಳ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಶೇಖಪ್ಪ ಚುಕಣಿ, ಅಮರೇಶಪ್ಪ ಹೊಸೂರ, ಮುದಕಪ್ಪ ತಳವಾರ, ಯಮನೂರಪ್ಪ ಪೂಜಾರ, ಸಿದ್ದು ಚುಕಣಿ, ಶರಣಪ್ಪ ಪೂಜಾರ ಸಂಗಪ್ಪ ಚುಕಣಿ, ಅಮರೇಶಪ್ಪ ಹೊಸೂರ, ಮಲ್ಲಪ್ಪ ಮಾಲೀಪಾಟೀಲ್, ಸಂಗಪ್ಪ ಚುಕಣಿ, ಶಿವಪ್ಪ ಚಳಗೇರಿ, ಸೇರಿ ಮತ್ತಿತರರು ಇದ್ದರು