ಹೊಸಪೇಟೆ

ನ್ಯಾ. ಕಾಂತರಾಜ್ ಆಯೋಗದ ಸಮೀಕ್ಷೆಯ ವರದಿ ಕೂಡಲೇ ಬಿಡುಗಡೆ ಮಾಡಲು ಆಗ್ರಹ

ನ್ಯಾ. ಕಾಂತರಾಜ್ ಆಯೋಗದ ಸಮೀಕ್ಷೆಯ ವರದಿ ಕೂಡಲೇ ಬಿಡುಗಡೆ ಮಾಡಲು ಆಗ್ರಹ

ವಿಜಯನಗರ 14: ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಅಮರಾವತಿಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ 12ನೇ ಶತಮಾನದಲ್ಲಿ ಹಿಂದುಳಿದ ಮತ್ತು ತಳಸಮುದಾಯಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಬಸವೇಶ್ವರರ ಪುತ್ತಳಿಗೆ ಮಾಲಾರೆ​‍್ಣ ಮಾಡಿ, “ಕಾಂತರಾಜ್ ಆಯೋಗದ ಜಾತಿವಾರು ಸಮೀಕ್ಷೆಯ ವರದಿ ಜಾರಿಯಾಗಲಿ”, “ಹಿಂದುಳಿದ ಜಾತಿಗಳಿಗೆ ವೈಜ್ಞಾನಿಕ ಮೀಸಲಾತಿ ಜಾರಿಗೊಳ್ಳಲಿ” ಎಂದು ಘೋಷಣೆಗಳನ್ನು ಕೂಗಿದರು.  

ನಂತರ ಜಿಲ್ಲಾಧಿಕಾರಿಗಳ ಕಛೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ಉದ್ಯೋಗ ಶೈಕ್ಷಣಿಕ ಮೀಸಲಾತಿ ವ್ಯವಸ್ತೆಯು 3 ದಶಕಗಳ ಹಿಂದೆ ಜಾರಿಗೆ ಬಂದ ನ್ಯಾಽಽ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಅನುಷ್ಠಾನದಲ್ಲಿದ್ದು, ಪ್ರಸ್ತುತ ಕಾಲಮಾನಕ್ಕೆ ಅನುಗುಣವಾಗಿಲ್ಲ.  

ಆದುದರಿಂದ ಪ್ರತಿ 10ವರ್ಷಕ್ಕೊಮ್ಮೆ ಜನಗಣತಿಯಾಗಿ ಹೊಸದಾಗಿ ಮೀಸಲಾತಿ ಪರಿಷ್ಕರಣೆಯಾಗಬೇಕೆಂಬ ಸುಪ್ರೀಂ ಕೋರ್ಟ್‌ನ ತೀರ​‍್ು ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ನ್ಯಾಽಽ ಕಾಂತರಾಜ್ ಆಯೋಗವು 1913 ರಿಂದ 1916ವರೆಗೆ ರಾಜ್ಯದಲ್ಲಿ ಎಲ್ಲಾ ಜಾತಿಗಳ ಮನೆಗಳಿಗೆ ತೆರಳಿ ಸಾಮಾಜಿಕ ಶೈಕ್ಷಣಿಕ, ಹಾಗೂ ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕಾರಣಾಂತರಗಳಿಂದಾಗಿ ಇದುವರೆಗೆ ಸಮೀಕ್ಷೆ ಬಿಡುಗಡೆಯಾಗಿಲ್ಲ.  

ಆಯೋಗವು ಕೇವಲ ಹಿಂದುಳಿದ ವರ್ಗಗಳ ಜಾತಿ ಗಣತಿ ಮಾಡದೇ ರಾಜ್ಯದ ಸಮಸ್ತ 7ಕೋಟಿ ವಿವಿಧ ಸಮುದಾಯಗಳ ಸ್ತಿತಿಗತಿಗಳ ದತ್ತಾಂಶ ಸಂಗ್ರಹಿಸಿದೆ. ಆಯೋಗವು ಸ್ವತಂತ್ರವಾಗಿ ಹಾಗೂ ನಿಸ್ಪಕ್ಷಪಾತವಾಗಿ ಎಲ್ಲಾ ಜಾತಿಗಳ ಸ್ಥಿತಿಗತಿಗಳ ವಸ್ತುನಿಷ್ಠ ಮಾಹಿತಿ ಸಂಗ್ರಹಿಸಿರುವುದರಿಂದ ವರದಿ ಬಿಡುಗಡೆಗೆ ಮುನ್ನವೇ ವರದಿಯ ವಿರುದ್ದ ಅಪಸ್ವರ ಎತ್ತುವುದು ಸರಿಯಲ್ಲ. ವರದಿ ಬಿಡುಗಡೆಯಾದ ನಂತರ ಹಿಂದುಳಿದ ಜಾತಿಗಳನ್ನು ಒಳಗೊಂಡ ಮೇಲ್ಜಾತಿಗಳಲ್ಲಿರುವ ಬಡವರಿಗೂ ವೈಜ್ಞಾನಿಕ ಮೀಸಲಾತಿ ನೀಡಿಕೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಲು ಅನುಕೂಲವಾಗುತ್ತದೆ. ಆದುದರಿಂದ ಸಂವಿಧಾನದ ಆಶಯದಂತೆ ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ನತದೃಷ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ ಕಲ್ಪಿಸುವುದು ಸರ್ಕಾರ ಮತ್ತು ವಿರೋಧ ಪಕ್ಷಗಳ ಕರ್ತವ್ಯವಾಗಿದ್ದು, ರಾಜ್ಯ ಸರ್ಕಾರವು ನ್ಯಾಽಽ ಕಾಂತರಾಜ್ ಆಯೋಗದ ಸಮೀಕ್ಷೆಯ ವರದಿಯನ್ನು ಕೂಡಲೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿಶಂಕರ್ ದೇವರಮನಿ, ಮುಖಂಡರಾದ ಎ.ಪಂಪಣ್ಣ, ವೈ.ಮಧುಸೂಧನ, ಬಿ.ವಿರುಪಾಕ್ಷಪ್ಪ, ಐಲಿಸಿದ್ದಣ್ಣ, ಎಂ.ಶಂಕ್ರ​‍್ಪ, ರಾಮಾಲಿ, ಯು.ಅಶ್ವಥಪ್ಪ, ಭೀಮಣ್ಣ, ರಾಮಲಿಂಗಪ್ಪ, ಕೆ.ರಾಮಕೃಷ್ಣ, ಗೋಪಿನಾಥ, ಯು.ನೀಲಕಂಠ, ಶ್ರೀನಿವಾಸ್, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ