ಅಥಣಿ

ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆಗೆ ಆಗ್ರಹ

ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆಗೆ ಆಗ್ರಹ

ಅಥಣಿ 06: ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಮಾಡಿ ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಬೇಕು ಎಂದು ಕನರ್ಾಟಕ ಮುಲ್ಲಾ ಅಸೋಸಿಯೇಶನ್ ಅಥಣಿ ಘಟಕದ ಅಧ್ಯಕ್ಷ ಮೂಸಾ ಮುಲ್ಲಾ ರಾಜ್ಯ ಸರಕಾರವನ್ನು ಆಗ್ರಹಿಸಿದರು. 

       ಅವರು ಮುಲ್ಲಾ ಅಸೋಸಿಯೇಷನ್ ಪದಾಧಿಕಾರಿಗಳ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ರಾಜ್ಯದ 105 ವಿಧಾನ ಸಭಾ ಕ್ಷೇತ್ರಗಳಲ್ಲಿ ಕನಿಷ್ಠ 5 ರಿಂದ 8 ಸಾವಿರದಂತೆ ಇಡೀ ರಾಜ್ಯದಲ್ಲಿ 13 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮುಲ್ಲಾ ಸಮುದಾಯ ಸರಕಾರದ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಸರಕಾರದ ಸೌಲಭ್ಯಗಳಿಗಾಗಿ ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಮಾಡಬೇಕು ಎಂದು ಆಗ್ರಹಿಸಿದರು. 

        ಮುಲ್ಲಾ ಸಮುದಾಯದ ವ್ಯಕ್ತಿ ಮುಸ್ಲಿಂ ಸಮಾಜ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ವ್ಯವಸ್ಥಾಪಕನಾಗಿದ್ದ ಆದರೆ ಇಂದು ಬದಲಾದ ದಿನಗಳಲ್ಲಿ ಆ ಗೌರವವನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ ಎಂದ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದ ಮುಲ್ಲಾ ಸಮುದಾಯ ಮೋಹರಂ ಹಬ್ಬದ ಅವಧಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉಚಿತವಾಗಿ ಸೇವೆ ಮಾಡುತ್ತ ಬಂದಿದ್ದು, ಈ ಸೇವೆಯನ್ನು ಗುರುತಿಸಿ ಸರಕಾರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. 

      ನಮ್ಮ ಸೇವೆಯನ್ನು ಗುರುತಿಸಿ ನಮಗೆ ನೀಡಿದ ಜಮೀನುಗಳನ್ನು ವಕ್ಫ ಆಸ್ತಿ ಘೋಶಿಸುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದ ಅವರು ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ಜಾರಿಯಾಗಬೇಕು, ಗ್ರಾಮ ಹಾಗೂ ನಗರದಲ್ಲಿ ಆಚರಿಸುತ್ತಿರುವ ಮೊಹರಂ ಹಬ್ಬಕ್ಕೆ ಸರಕಾರ ಸಹಾಯ ಧನ ನೀಡಬೇಕು, ಹೊಹರಂ ಹಬ್ಬದ ರೂವಾರಿಗಳು ಮತ್ತು ದರ್ಗಾದ ಮುತವಲ್ಲಿ ಇವರಿಗೆ ಮಾಸಿಕ ಪಿಂಚಣಿ ನೀಡಬೇಕು ಮತ್ತು ಬೇರೆ ಬೇರೆ ರಾಜ್ಯಗಳಲ್ಲಿರುವ ಮುಲ್ಲಾ ಸಮುದಾಯವನ್ನು ಕೆಟಗೇರಿ-1 ವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು

ಸುದ್ದಿ ಓದಿ