ಚಿಕ್ಕೋಡಿ

ಕನ್ನಡಿಗರಿಗೆ ಬೆದರಿಕೆ: ಶೇಳಕೆ ಗಡಿಪಾರಿಗೆ ಒತ್ತಾಯಿಸಿ ಮನವಿ

ಕನ್ನಡಿಗರಿಗೆ ಬೆದರಿಕೆ: ಶೇಳಕೆ ಗಡಿಪಾರಿಗೆ ಒತ್ತಾಯಿಸಿ ಮನವಿ

ಮಾಂಜರಿ  17: ಕನ್ನಡಿಗರನ್ನು ಬೆಳಗಾವಿಯಲ್ಲಿ ಹೊಡೆಯುತ್ತೇವೆ ಎಂದು ದಿ. 12 ರಂದು ಬೆದರಿಕೆ ಒಡ್ಡಿದ ಬೆಳಗಾವಿಯ ಎಂಇಎಸ್ ಮತ್ತು ಶಿವಸೇನೆಯ ಕಾರ್ಯಕರ್ತ ಶುಭಂ ಶೇಳಕೆ ಇವನನ್ನು ಶೀಘ್ರವೇ ಪೋಲಿಸ ಹಾಗೂ ಜಲ್ಲಾಡಳಿತ ಗಡಿಪಾರು ಮಾಡುವಂತೆ ಒತ್ತಾಯಿಸಿ ಇಂದು ಬುಧವಾರ ಅಂಕಲಿ ಪೋಲಿಸ ಠಾಣೆಗೆ ತೆರಳಿ ಕರವೇ ಜಿಲ್ಲಾ ಸಂಚಾಲಕ ಸಂಜು ಬಡಿಗೇರ ಮನವಿ ಸಲ್ಲಿಸಿದರು.

ಇದೆ 12 ರಿಂದ ಸಾಮಾಜಿಕ ಜಾಲತಾನ ಮತ್ತು ಮಾಧ್ಯಮಗಳಲ್ಲಿ ಶೇಳಕೆ ಇವನು ಕನ್ನಡಿಗರನ್ನು ಅವಹೇಳನ ಮಾಡುವ ಉದ್ದೇಶದಿಂದ ಹಳದಿ ಕೆಂಪು ಶಾಲ ಹೊಂದಿದ ಯುವಕರನ್ನು ಕಂಡು-ಕಂಡಲ್ಲಿ ಥಳಿಸಲಾಗುವುದು ಎಂದು ಕನ್ನಡಿರಿಗೆ ಜೀವ ಬೆದರಿಕೆ ಹಾಕಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ಕನ್ನಡಿಗರ ವಿರುದ್ಧ ಎತ್ತಿಕಟ್ಟಿ ಕರ್ನಾಟಕ ರಾಜ್ಯದಂತಹ ಶಾಂತಿ ಸುವ್ಯವಸ್ಥೆ ಹದಗೆಡುವಂತೆ ಮಾಡುತ್ತಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

ಇದರಿಂದ ಬೆಳಗಾವಿ ನಗರದಲ್ಲಿ, ಹಾಗೂ ರಾಜ್ಯದ ಗಡಿಭಾಗದ ಗ್ರಾಮಗಳಲ್ಲಿ ಅಶಾಂತಿ ಉಂಟಾಗುತ್ತಿದ್ದು, ಶೀಘ್ರವೇ ಶುಭಂ ಶೇಳಕೆ ಇವನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಎಂಇಎಸ್ ಸಂಘಟಣೆ ನಿಷೇಧಿಸಬೇಕು ಮತ್ತು ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಅಂಕಲಿ ಪಿಎಸ್‍ಐ ಅವರಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು. ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಕರ್ನಾಟಕ ಕನ್ನಡಿಗರ ಮೇಲೆ ಶುಭಂ ಶೇಳಕೆ ಇತನು ಹಾಗೂ ಶಿವಸೇನೆ ಮತ್ತು ಎಂಇಎಸ್ ಇವರು ಇಷ್ಟೊಂದು ಕನ್ನಡಿಗರನ್ನು ದ್ವೇಷಿಸುವುದು ಸರಿಯಲ್ಲಾ, ಇದೆ ರೀತಿ ಪುಂಡಾಟಿಕೆ ನಡೆಸಿದರೆ ಬೆಲೆ ತೆತ್ತಬೇಕಾಗುತ್ತದೆ. ಇಷ್ಟೊಂದು ಮರಾಠಿ ಅಭಿಮಾನವಿದ್ದಲ್ಲಿ ರಾಜ್ಯದಿಂದ ಪಡೆದ ಎಲ್ಲಾ ಸವಲತ್ತು ದಮ್ಮಿದಲ್ಲಿ ಮರಳಿ ನೀಡಲಿ ಎಂದು ಚಿಕ್ಕೋಡಿ ಕರವೇ ಅಧ್ಯಕ್ಷ ನಾಗೇಶ ಮಾಳಿ ಸವಾಲು ಹಾಕಿದ್ದಾರೆ.


ಸುದ್ದಿ ಓದಿ