ನ್ಯಾಯವಾದಿಗಳ ಮೇಲೆ ದುರುದ್ದೇಶ ಪೂರ್ವಕ ಮಾಡಿದ ಎಫ್.ಐ.ಆರ್ನ್ನು ರದ್ದು ಮಾಡುವಂತೆ ಆಗ್ರಹ
ಅಥಣಿ 04: ನ್ಯಾಯವಾದಿಗಳ ಹಿತರಕ್ಷಣಾ ಕಾನೂನನ್ನು ಪ್ರಸಕ್ತ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರಬೇಕು ಮತ್ತು ಚಿಕ್ಕಮಗಳೂರಿನ 14 ಜನ ನ್ಯಾಯವಾದಿಗಳ ಮೇಲೆ ದುರುದ್ದೇಶ ಪೂರ್ವಕ ಮಾಡಿದ ಎಫ್.ಐ.ಆರ್ನ್ನು ರದ್ದು ಮಾಡಬೇಕು ಎಂದು ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ ಆಗ್ರಹಿಸಿದರು.
ಅವರು ಚಿಕ್ಕಮಗಳೂರಿನ ನ್ಯಾಯವಾದಿಯೋರ್ವನ ಮೇಲೆ ಅಮಾನವೀಯ ರೀತಿ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಅಥಣಿ ನ್ಯಾಯವಾದಿಗಳ ಸಂಘದ ಸದಸ್ಯರು ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿ ಮಾತನಾಡುತ್ತಿದ್ದರು.
ಚಿಕ್ಕಮಗಳೂರಿನ ನ್ಯಾಯವಾದಿ ಪ್ರೀತಮ ಎನ್ನುವವರ ಮೇಲೆ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹಲವು ದಿನಗಳೇ ಕಳೆದವು ಆದರೆ ಇಲ್ಲಿಯವರೆಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಇಂದಿನ ವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದ ಅವರು ನ್ಯಾಯವಾದಿಗಳ ಮೇಲೆ ಇತ್ತೀಚಿಗೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲಿ ನ್ಯಾಯವಾದಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಗಳ ಸಂಘದ ಹಿರಿಯ ಸದಸ್ಯ ಕೆ.ಎ.ವಣಜೊಳ ಮಾತನಾಡಿ, ನ್ಯಾಯವಾದಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸದೇ ಇದ್ದುದರಿಂದಲೇ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲಿ ನ್ಯಾಯವಾದಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಗಳ ಸಂಘದ. ಸದಸ್ಯ ಸಿದ್ಧಾರೂಢ ಸವದಿ ಮಾತನಾಡಿ, ವಕೀಲರ ಮೇಲೆ ಹಲ್ಲೆಗೆ ಕಾರಣರಾದ ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಮತ್ತು ಅನೇಕ ವರ್ಷಗಳಿಂದ ಬೇಡಿಕೆ ಇರುವ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಜಾರಿಗೊಳಿಸುವ ನಿಧರ್ಾರ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಮಿತೇಶ ಪಟ್ಟಣ ಮಾತನಾಡಿ, ಚಿಕ್ಕಮಗಳೂರಿನ ನ್ಯಾಯವಾದಿಯೋರ್ವನ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದ ಅವರು ನ್ಯಾಯವಾದಿಗಳ ಮೇಲೆ ಹಲ್ಲೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹಲ್ಲೆಯಂತಹ ಘಟನೆ ಸಂಭವಿಸಿದಲ್ಲಿ ಕಠಿಣ ಕ್ರಮ ಜರುಗಿಸಲು ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಆರ್.ಎಮ್.ಭೋಸಲೆ, ಎಸ್.ಎಸ್.ಬಾಡಗಿ, ಸುನೀಲ ಸಂಕ, ಅರುಣ ಮೇಲ್ಗಡೆ, ಪಿ.ಬಿ.ಬಿಸಗುಪ್ಪಿ, ಭಾಹುಸಾಹೇಬ ಕಾಂಬಳೆ ಸೇರಿದಂತೆ ಅನೇಕರು ಮಾತನಾಡಿದರು.
ಎಸ್.ಎಸ್.ಪಾಟೀಲ, ಶಾರದಾ ಕೊಟ್ಟುರಮಠ, ಸಿದ್ರಾಮ ಪಾಟೀಲ, ಎಸ್.ಸಿ.ನಾಯಿಕ, ಕೆ.ಎಚ್.ಅವಟಿ, ಎಮ್.ಯ.ಸನದಿ, ಮೋಹನ ದೊಡ್ಡಮನಿ, ಸುಶೀಲ ಪತ್ತಾರ, ಎಮ್.ಆರ್.ನಡುವಿನಮನಿ, ಎ.ಎಮ್.ಖೊಬ್ರಿ, ರಾಜು ದರೂರ, ಗೌರೀಶ ಹಿರೇಮಠ, ಶಂಕರ ಪಾಟೀಲ್, ವಿಠ್ಠಲ ಕಂಕಣವಾಡಿ, ಭಂಗಾರೆಪ್ಪ ಕಾಂಬಳೆ, ಸದಾ ಅವತಾಡೆ ಸೇರಿದಂತೆ ನೂರಾರು ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು