ಕೊಟ್ಟರೆ ಸರಕಾರಕ್ಕೆ ಸನ್ಮಾನ, ಕೊಡದಿದ್ದರೇ ಸತ್ಯಾಗ್ರಹ: ಕೂಡಲಸಂಗಮ ಸ್ವಾಮೀಜಿ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ
ಚಿಕ್ಕೋಡಿ 23: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸ್ಥಾನಮಾನ ಕೊಡಬೇಕು. ಮಾತುಕೊಟ್ಟಂತೆ ಸಿಎಂ ಅವರು ಮೀಸಲಾತಿ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ಬರುವ ಅ.1ರ ಒಳಗಾಗಿ ಘೋಷಣೆ ಮಾಡಿದರೇ ಸಿಂ ಅವರಿಗೆ ಸನ್ಮಾನ ಇಲ್ಲದೇ ಹೋದರೇ ಸತ್ಯಾಗ್ರಹ ಮುಂದುವರೆಸಲಾಗುತ್ತದೆ ಎಂದು ಕೂಡಲಸಂಗಮದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಗಡುವು ನೀಡಿದರು.
ಗುರುವಾರ ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು., ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಸಮುದಾಯಕ್ಕೆ ಮಾತನ್ನು ಕಳಕೊಂಡಿದೆ. ಈ ಹಿನ್ನೆಲೆಯಲ್ಲಿ ಬರುವ ಒಂದನೆ ತಾರೀಖಿನ ವರೆಗೆ ಕಾದು ನೋಡುತ್ತೇವೆ. ನಮ್ಮ ಬೇಡಿ ಈಡೇರಿಕೆಗೆ ಆಗದೆ ಇದ್ದಲ್ಲಿ ಮತ್ತೆ ಬೆಂಗಳೂರಿನಲ್ಲಿ ಸತ್ಯಾಗ್ರಹ ವನ್ನು ಪ್ರಾರಂಭಿಸುವದಾಗಿ ಎಚ್ಚರಿಕೆ ನೀಡಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಸರಕಾರಕ್ಕೆ ಎಚ್ಚರಿಸುವ ಕಾರ್ಯದ ಅಂಗವಾಗಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನವನ್ನು ಚಾಮರಾಜ ನಗರ ಜಿಲ್ಲೆಯಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ. ಅದು ಅಲ್ಲಿಂದ ಹೊರಟು ಬೆಳಗಾವಿ ನಗರಕ್ಕೆ ಬಂದಿದೆ. ನಾಳೆ ದಿ. 24ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ಈ ಪಂಚಾಯತ ನಡೆಯಲಿದೆ. ಸರಕಾರ ಕೊಟ್ಟ ಮಾತಂತೆ ನೆನಪಿಸುವದಕ್ಕೆ ಸರಕಾರವನ್ನು ಮೀಸಲಾತಿ ನೀಡುವ ಮಾತನ್ನು ಸರಕಾರ ಮರೆತಿದೆ. ರಾಜ್ಯದ ಪಂಚಮ ಸಾಲಿ ಲಿಂಗಾಯತ ನಾಯಕರು ಸರಕಾರದ ಮಟ್ಡದಲ್ಲಿಮೀಸಲಾತಿ ನೀಡುವ ಬಗ್ಗೆ ಹಕ್ಕೋತ್ತಾಯ ಮಂಡಿಸಿದ್ದಾರೆ. ಈ ಸರಕಾರದಿಂದ ಮೀಸಲಾತಿ ಸಿಗಬಹುದು ಎನ್ನುವ ವಿಶ್ವಾಸ ಇದೆ ಎಂದರು.
ಪಂಚಮಸಾಲಿ ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಒಂದನೆ ತಾರೀಖ ವರೆಗೆ ನಮ್ಮ ಬೇಡಿಕೆ ಈಡೇರಿಕೆಗೆ ಆಗದಿದ್ದರೆ ಮತ್ತೆ ಸತ್ಯಾಗ್ರಹ ಪ್ರಾರಂಭವಾಗಲಿದೆ. ಜೆ.ಎಚ್.ಪಟೇಲರ ಜಯಂತಿ ಮೂಲಕ ಸತ್ಯಾಗ್ರಹ ಪ್ರಾರಂಭಿಸುತ್ತೆವೆ. ಪ್ರಿಡಂಪಾರ್ಕ್ ದಲ್ಲಿ ಸತ್ಯಾಗ್ರಹ ನಡೆಯಲಿದೆ. ಬಸವಾಭಿಮಾನಿಗಳು ಮುಖ್ಯಮಂತ್ರಿ ಯಾಗಿದ್ದಾರೆ ಅವರು ಸಮುದಾಯಕ್ಕೆ ಮೀಸಲಾತಿ ನೀಡಬಹುದು ಎನ್ನುವ ವಿಶ್ವಾಸ ಇದೆ ಎಂದು ನುಡಿದರು.
ದಾನಪ್ಪ ಕೊಟಬಾಗಿ. ಅಶೋಕ ಹರಗಾಪೂರೆ, ರಾಜು ಹಿರೇಕೊಡಿ, ಸಿದ್ದಗೌಡ ಪಾಟೀಲ, ವೃಷಭಗೌಡ ಪಾಟೀಲ, ಕಾಶಿನಾಥ ಕುರಣಿ ಮುಂತಾದವರು ಇದ್ದರು.