ಬಹುಪಯೋಗಿ ಬ್ರಿಜ್ ಕಂ ಬಾಂದಾರು ಕಾಮಗಾರಿ ವಿಳಂಬ
ಇಂಗಳಿ ಮತ್ತು ಡಿಗ್ಗೇವಾಡಿ ಬ್ಯಾರೇಜ್ ಕೆಲಸ ಅಪೂರ್ಣ 2ನೇ ಕಂತಿನ ಅನುದಾನ ಬಿಡುಗಡೆ ಮಾಡದ ಸರಕಾರ
ಸಂತೋಷ ಕುಮಾರ ಕಾಮತ್
ಮಾಂಜರಿ : ನಿಗದಿತ ಅವಧಿಯಲ್ಲಿ ದಿಗೇವಾಡಿ- ಇಂಗಳಿ ಬ್ಯಾರೇಜ್ ನಿರ್ಮಾ ಣಗೊಂಡಿದ್ದರೆ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು, ನೂರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯವಾಗು ತಿತ್ತು. ಆದರೆ, ಆಮೆಗತಿ ಕಾಮಗಾರಿ ಅನುಕೂಲ ಗ್ರಾಮೀಣರಿಗೆ ಇನ್ನೂ ದೂರದ ಮಾತಾಗಿದೆ.
ಚಿಕ್ಕೋಡಿ ತಾಲೂಕಿನ ಇಂಗಳಿ ಮತ್ತು ರಾಯಬಾಗ ತಾಲೂಕಿನ ದಿಗ್ಗೇವಾಡಿ ಬಳಿ ಕೃಷ್ಣಾ ನದಿಗೆ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸುತ್ತಿರುವ ದಿಗ್ಗೇವಾಡಿ ಇಂಗಳಿ ಬ್ಯಾರೇಜ್ನಿಂದ - ಚಿಕ್ಕೋಡಿ ತಾಲೂಕಿನ ಯಡೂರ, ಚಂದೂರ, ಅಂಕಲಿ, ಮಾಂಜರಿ, ಇಂಗಳಿ, ಕಲ್ಲೋಳ, ಯಕ್ಸಂಬಾ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಜತೆಗೆ ರಾಜದಾಗ ಮತ್ತು ಕಾಗವಾಡ ತಾಲೂಕಿನ ಹಲವಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಏತ ನೀರಾವರಿ ಯೋಜನೆಗಳಿಗೂ ಅನುಕೂಲವಾಗಲಿದೆ. ಆದರೆ, ಕಾಮಗಾರಿ ಆರಂಭವಾಗಿ ಐದು ವರ್ಷಗಳು ಗತಿಸಿದರೂ ಬ್ಯಾರೇಜ್ ನಿರ್ಮಾಣವಾಗಿಲ್ಲ.
ಡಾ.ಕೋರೆ ಮುತುವರ್ಜಿ : ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಮುತುವರ್ಜಿ ವಹಿಸಿ ಕೃಷ್ಣಾನದಿಗೆ ದಿಗ್ಗೇವಾಡಿ ಇಂಗಳ ಬ್ಯಾರೇಜ್ ರೂಪಿಸಿದ್ದರು. ವಿಧಾನ ಪರಿಷತ್ ಯೋಜನೆ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಈ ಯೋಜನೆ ಜಾರಿಗಾಗಿ ಹೋರಾಟ ಮಾಡಿ ಕಾಮಗಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಸ್ಥಳ ಹಿಪ್ಪರಗಿ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತದೆ ಎಂದು ಕಾರಣ ನೀಡಿದ ಆರ್ಥಿಕ ಇಲಾಖೆ ಪ್ರಸ್ತಾವಕ್ಕೆ ಅನುಮೋದನೆ ನೀಡಿರಲಿಲ್ಲ.
'ಬೇಸಿಗೆ ಕಾಲದಲ್ಲಿ ಹಿಪ್ಪರಗಿ ನೀರು ಕಡಿಮೆಯಾಗುತ್ತದೆ. ಸಂದರ್ಭದಲ್ಲಿ ಐದಾರು ತಿಂಗಳು ಈ ಬ್ಯಾರೇಜ್ನಿಂದ ಕಾಗವಾಡ, ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಹಲವಾರು ಹಳ್ಳಿಗಳ ಬಹುಗ್ರಾಮಕುಡಿಯುವ ನೀರಿನ ಯೋಜನೆ ಮತ್ತು ಏತ ನೀರಾವರಿ ಯೋಜನೆಗಳಿಗೆ ಈ ಬ್ಯಾರೇಜ್ ನಿಂದ ಅನುಕೂಲವಾಗಲಿದೆ' ಮಹಾಂತೇಶ ಕವಟಗಿಮಠ ಅವರು ಅಂದಿನ ಎ0ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೀರಾವರಿ ಸಚಿವ ರಮೇಶ ಜಾರಕಿಹೊಳಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಳಿಕ ಈ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿತ್ತು. ಮೊದಲ ಹಂತದಲ್ಲಿ ಸರಕಾರ 35 ಕೋಟಿ ರೂ. ಅನು ದಾನ ಮಂಜೂರು ಮಾಡಿತ್ತು. ಅಂದಿನ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ 2017-18ರಲ್ಲಿ
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸದ್ಯ ಅರ್ಧ ಕಾಮಗಾರಿ ಆಗಿದ್ದು, ರಾಜ್ಯ ಸರಕಾರ ಬಾಕಿ 35 ಕೋಟಿ, ರೂ. ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕಾಮಗಾರಿ ಮುಂದುವರಿಯುತ್ತಿಲ್ಲ.
**
ಸುಲಭ ಸಂಚಾರಕ್ಕೂ ಪೂರಕ
ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದ ಬಳಿ ಕೃಷ್ಣಾನದಿಗೆ ನಿರ್ಮಿಸುತ್ತಿರುವ ಈ ಬ್ರಿಜ್ ಕಂ ಬಾಂದಾರು, ರಾಯಬಾಗ ಮತ್ತು ಕಾಗವಾಡ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಮಾರ್ಗವಾಗಲಿದೆ. ಈ ಮಾರ್ಗದಿಂದ ರಾಯಭಾಗ ತಾಲೂಕಿನ ಜನರಿಗೆ ಕಾಗವಾಡ ಸಂಚಾರ ಸುಲಭವಾಗಲಿದೆ
**
ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಕಾರಣದಿಂದ ಹೊಸ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ರಾಜ್ಯದ ಅಭಿವೃದ್ಧಿಯನ್ನೇ ಸರಕಾರ ಮರೆತಿದೆ. ಚಿಕ್ಕೋಡಿ, ಕಾಗವಾಡ ಮತ್ತು ರಾಯಬಾಗ ತಾಲೂಕಿನ ಹಲವಾರು ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಮತ್ತು ಏತ ನೀರಾವರಿ ಯೋಜನೆಗಳಿಗೆ ಅನುಕೂಲವಾಗಲಿರುವ ದಿಗ್ಗೇವಾಡಿ-ಇಂಗಳಿ ಬ್ಯಾರೇಜ್ ಕಾಮಗಾರಿ ಪೂರ್ತಿಗೊಳಿಸಲು ಸರಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು.
- ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಹಾಗೂ ಮಾಜಿ ಸದಸ್ಯ
ರಾಜ್ಯ ಸರಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಬೇಕು. ಅರ್ಧಕ್ಕೆ ನಿಂತಿರುವ ದಿಗ್ಗೇವಾಡಿ-ಇಂಗಳಿ ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಹಿಂದಿನ ಬಿಜೆಪಿ ಸರಕಾರ ಮಂಜೂರಾತಿ ನೀಡಿರುವ ನೀರಾವರಿ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡಬೇಕು.
- ದುರ್ಯೋಧನ ಐಹೊಳೆ, ರಾಯಬಾಗ ಶಾಸಕ
ಮತಕ್ಷೇತ್ರದ ಸರ್ವಾಂಗೀಣಯ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರು ತಮ್ಮ ಮತಕ್ಷೇತ್ರದಲ್ಲಿ ನನಗಿದೆ ಬಿದ್ದಿರುವ ನೀರಾವರಿ ಯೋಜನೆಯ ಜೊತೆಗೆ ಬ್ರೀಜ್ ಕಮ್ ಭಂದಾರ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯ ಸರ್ಕಾರ ಕಡೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಕಂತು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸ್ಥಳೀಯ ರೈತ ಪುಂಡಲಿಕ ಧನವಾಡೇ ಒತ್ತಾಯಿಸಿದ್ದಾರೆ.
-ಪುಂಡಲಿಕ್ ಧನವಾಡೇ ಇಂಗಳಿ