ಬೈಲಹೊಂಗಲ

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ: ಗಣಾಚಾರಿ

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ: ಗಣಾಚಾರಿ

ಲೋಕದರ್ಶನ ವರದಿ

ಬೈಲಹೊಂಗಲ 29: ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಮರಕುಂಬಿ  ಬಿ.ಬಿ.ಗಣಾಚಾರಿ ಎಜ್ಯುಕೇಶನ ಸೊಸೈಟಿ  ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಕಾರ್ಯದಶರ್ಿ ವೀರುಪಾಕ್ಷ ಗಣಾಚಾರಿ ಹೇಳಿದರು.

   ಅವರು ಸಮೀಪದ ಮರಕುಂಬಿ ಗ್ರಾಮದ ಬಿ.ಬಿ.ಗಣಾಚಾರಿ ಪ್ರಾಥಮಿಕ ಮತ್ತು ಪ್ರೌಡಶಾಲೆಯ ವಾಷರ್ಿಕ ಕ್ರೀಡಾಕೂಟದ ಜ್ಯೋತಿ ಬರಮಾಡಿಕೊಂಡು ಮಾತನಾಡಿ, ವಿದ್ಯಾಥರ್ಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ಸಂಸ್ಕಾರ ನೀಡುವುದು ಅವಶ್ಯವಾಗಿದೆ. ಸಕರ್ಾರ ಮಕ್ಕಳ ಕಲಿಕೆಗೋಸ್ಕರ ಪ್ರತಿವರ್ಷ ಸಾವಿರಾರು ಕೋಟಿ ವೆಚ್ಚ ಮಾಡಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡೆದುಕೊಂಡು  ಮುಂದೆ ಬರಬೇಕೆಂದರು.

 ನಮ್ಮ ಶಾಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ ತುಂಬಾ ಅನುಕೂಲವಾಗಿದ್ದು ಸುಸಜ್ಜಿತ ಕಟ್ಟಡ, ಭವ್ಯವಾದ ಆಟದ ಮೈದಾನ, ವಾಹನ ವ್ಯವಸ್ಥೆ,  ಸ್ಮಾರ್ಟ ಬೋರ್ಡ, ಕಂಪ್ಯೂಟರ್ ಲ್ಯಾಬ್ , ವಸತಿ, ನುರಿತ ಶಿಕ್ಷಕರಿದ್ದು ಇದರಿಂದ ವಿದ್ಯಾಥರ್ಿಗಳ ಕಲಿಕೆಗೆ ತುಂಬಾ ಸಹಕಾರಿಯಾಗಲಿದೆ. ಅಲ್ಲದೇ ಪ್ರತಿವರ್ಷ ಸಂಸ್ಥೇಯ ಸಂಸ್ಥಾಪಕರು ತಮ್ಮ ಹುಟ್ಟುಹಬ್ಬದ ಆಚರಣೆ ನಿಮಿತ್ಯ 5 ಜನ ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣ ವೆಚ್ಚ ತಾವೇ ಭರಿಸುತ್ತಾರೆ ಎಂದರು.

  ವಿದ್ಯಾಥರ್ಿಗಳು ಕಲಿಕೆ ಜೊತೆಗೆ ಕ್ರೀಡಾಕೂಟಕ್ಕೂ ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಶಾರೀರಕ ಆರೋಗ್ಯ ಸಂಪತ್ತನ್ನು ಕಾಪಾಡಿಕೊಂಡು ಸತ್ಪಜ್ರೆಗಳಾಗಿ ಹೊರಹೊಮ್ಮಿ ಬಲಿಷ್ಠ ರಾಷ್ರ್ಟ ನಿಮರ್ಾಣ ಮಾಡುವ ಸಂಕಲ್ಪ ಮಾಡಿ ಸಂಸ್ಥೆಗೆ ಕೀತರ್ಿ ತರಬೇಕೆಂದರು.

   ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಂ.ಅಂಬರಶೆಟ್ಟಿ, ಶಿಕ್ಷಕರಾದ ಎ.ಕೆ.ಮುಲ್ಲಾ, ಎಂ.ಡಿ.ಅಂಬೋಜಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ವಿದ್ಯಾಥರ್ಿಗಳು ಇದ್ದರು. ಎಂ.ಡಿ.ಕಡಬಿ ನಿರೂಪಿಸಿ, ವಂದಿಸಿದರು 

ಸುದ್ದಿ ಓದಿ