ರಾಣೆಬೆನ್ನೂರ

ಶನೈಶ್ಚರ ಮಂದಿರದಲ್ಲಿ ಪ್ರಜ್ವಲಿಸಿದ ಲೋಕಕಲ್ಯಾಣಾರ್ಥ ಲಕ್ಷದೀಪೋತ್ಸವ.

ಶನೈಶ್ಚರ ಮಂದಿರದಲ್ಲಿ ಪ್ರಜ್ವಲಿಸಿದ ಲೋಕಕಲ್ಯಾಣಾರ್ಥ ಲಕ್ಷದೀಪೋತ್ಸವ.
ಇಲ್ಲಿನ ಶನೈಶ್ಚರ ಮಂದಿರದಲ್ಲಿ ನಡೆದ ತಿಲ ಲಕ್ಷದೀಪೋತ್ಸವದ ವಿಹಂಗಮ ನೋಟ

ರಾಣೇಬೆನ್ನೂರ 09:  ರಾಜ್ಯದಲ್ಲಿಯೇ ಪ್ರಥಮವೆಂಬ ಹೆಗ್ಗಳಿಕೆಗೆ  ಪಾತ್ರವಾಗಿರುವ ನಗರದ ಹೊರ ವಲಯದಲ್ಲಿರುವ ಹಿರೇಮಠ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಶನೈಶ್ಚರ ಮಂದಿರದಲ್ಲಿ ಶನಿವಾರ ರಾತ್ರಿ ವಾರ್ಷಿಕೋತ್ಸವದ ಅಂಗವಾಗಿ  ಹಾಗೂ ಲೋಕಕಲ್ಯಾಣಕ್ಕಾಗಿ  ಜ್ಞಾನ ಲಕ್ಷದೀಪೋತ್ಸವ ಕಾರ್ಯಕ್ರಮವು ಭಕ್ತ ಸಾಗರದ ಮಧ್ಯ ಶೃದ್ದಾ ಹಾಗೂ ಭಕ್ತಿಪೂರ್ವಕವಾಗಿ ನೆರವೇರಿತು.  

ಲಕ್ಷ ದಿಪೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಒಂದು ಕಿ.ಮಿ ಉದ್ದಕ್ಕೂ ಸಾಗಿದ ಈ ದೀಪೋತ್ಸವದಲ್ಲಿ ಭಕ್ತರ ನೂಕು ನುಗ್ಗಲಿನ ಮಧ್ಯೆಯೂ ದೀಪ ಹಚ್ಚಲು ಬಹಳಷ್ಟು ಪ್ರಯಾಸಪಡುತ್ತಿದ್ದುದು ಕಂಡು ಬಂದಿತು.    ಸುಮಾರು ಒಂದು ಘಂಟೆಯ ಕಾಲ  ಬೆಳಗಿದ ದೀಪದಿಂದ ಮಂದಿರದ ಸುತ್ತ-ಮುತ್ತ ಪ್ರಕಾಶಮಾನವಾದ ವಾತಾವರಣ ಉಂಟಾಗಿತ್ತು. ಸಂಜೆ 4ಗಂಟೆಯಿಂದಲೇ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ನಂತರ ನೀರೀಕ್ಷೆಗೂ ಮೀರಿ ಜನಸ್ಥೋಮ ತಂಡೋಪ ತಂಡವಾಗಿ ಆಗಮಿಸಿ ದೀಪೋತ್ಸವದಲ್ಲಿ ಭಾಗವಹಿಸಿತ್ತು          

ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಮತ್ತು ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ಸಮ್ಮುಖದಲ್ಲಿ ಮತ್ತಿತರ ಮಠಾಧೀಶರುಗಳ ನೇತೃತ್ವದಲ್ಲಿ   ಶಾಸಕ ಅರುಣಕುಮಾರ ಪೂಜಾರ  ದೀಪೋತ್ವವಕ್ಕೆ ಚಾಲನೆ ನೀಡಿ, ನಾಡಿನ ಜನತೆ ಸುಖ ಸಮೃದ್ಧಿಯಿಂದ ಇರಲಿ, ಭೂಮಿ ಹಸಿರಾಗಲಿ, ಸರ್ವರ ಬಾಳು ಹಸನಾಗಲಿ ಎಂಬ ಉದ್ದೇಶದಿಂದ ಇಂತಹ ಸಮಾಜ ಮುಖಿ ಧಾರ್ಮಿಕ ಕಾರ್ಯಕ್ರಮವನ್ನು ವರ್ಷದುದ್ದಕ್ಕೂ ವೈವಿಧ್ಯಮಯವಾಗಿ ಏರಿ​‍್ಡಸಿರುವುದು ಶ್ಲಾಘನೀಯವಾಗಿದೆ ಎಂದರು. 

ಹರ-ಗುರು-ಚರಮೂರ್ತಿಗಳು, ಹಾಲಿ ಮಾಜಿ ಶಾಸಕರು, ಸಚಿವರು, ಜಿಪಂ, ತಾಪಂ, ಗ್ರಾಪಂ ಹಾಗೂ ನಗರಸಭೆ ಹಾಲಿ ಮಾಜಿ ಸದಸ್ಯರುಗಳು, ವಿವಿಧ ಮಹಿಳಾ ಸಂಘಟನೆಗಳು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸ್ವಾಗತ ಸಮಿತಿಯ ವಿವಿಧ ಪದಾಧಿಕಾರಿಗಳು, ಭಕ್ತರು  ಮತ್ತಿತರರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದರು.  

ಸುದ್ದಿ ಓದಿ