‘ಪಠಾಣ್’ ಚಿತ್ರದಲ್ಲಿ ಮತ್ತೆ ದೀಪಿಕಾ- ಶಾರೂಖ್ ಜೋಡಿ
ಮುಂಬೈ, ನವೆಂಬರ್ 24: ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರು ‘ಪಠಾಣ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದು, ಚಿತ್ರೀಕರಣ ಆರಂಭವಾಗಿದೆ.ದೀಪಿಕಾ ಪಡುಕೋಣೆ ಶಕುನ್ ಬಾತ್ರಾ ಅವರ ಚಿತ್ರದಲ್ಲಿಯೂ ತೊಡಗಿಸಿಕೊಂಡಿರುವ ಕಾರಣ ‘ಪಠಾಣ್’ ಶೂಟಿಂಗ್ ನಲ್ಲಿ ಒಂದೆರಡು ದಿನ ಭಾಗವಹಿಸಿದ್ದರು.‘ಪಠಾಣ್’ ಚಿತ್ರದಲ್ಲಿ ದೀಪಿಕಾ ಏಜೆಂಟ್ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಏಜೆಂಟರ ಕುತೂಹಲಕಾರಿ ಜಗತ್ತನ್ನು ಅನಾವರಣಗೊಳಿಸಲಿದ್ದು, ದೀಪಿಕಾ ಪಡುಕೋಣೆ ಆ್ಯಕ್ಷನ್ ಸನ್ನಿವೇಶಗಳನ್ನು ನಿಭಾಯಿಸಬೇಕಿದೆ. ಚಿತ್ರದ ಶೀರ್ಷಿಕೆಯು ಶಾರೂಖ್ ಕೇಂದ್ರಿತವಾಗಿದ್ದರೂ, ದೀಪಿಕಾ ಪಾತ್ರಕ್ಕೆ ಮಹತ್ವವಿದೆ ಎನ್ನಲಾಗಿದೆ.ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಏಜೆಂಟರ ಪಾತ್ರದಲ್ಲಿದ್ದರೆ, ಜಾನ್ ಅಬ್ರಹಾಂ ಬ್ಯಾಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಮತ್ತಷ್ಟು ರಂಗು ಸಿಗಲಿದೆ.