ವಿಶ್ವ ಹಿಂದೂ ಪರಿಷತ್ದಿಂದ ದೀಪ ಲಕ್ಷ್ಮಿ ಕಾರ್ಯಕ್ರಮ
ಸಿಂದಗಿ ಪಟ್ಟಣದ ಮಾಂಗಲ್ಯ ಭವನದಲ್ಲಿ ವಿಶ್ವ ಹಿಂದೂ ಪರಿಷತ್ವತಿಯಿಂದ ಹಮ್ಮಿಕೊಂಡ ದೀಪ ಲಕ್ಷ್ಮಿ ಕಾರ್ಯಕ್ರಮದಲ್ಲಿ ದೀಪ ಲಕ್ಷ್ಮಿ ಪೂಜೆ ನೇರವೇರಿಸಲಾಯಿತು.
ಸಿಂದಗಿ: ಪ್ರತಿ ವರ್ಷ 60 ಸಾವಿರ ಕ್ಕಿಂತ ಹೆಚ್ಚು ಹಿಂದೂ ಯುವತಿಯರು ಲವ್ ಜಿಹಾದ್ ಗೇ ಬಲಿಯಾಗುತ್ತಿದ್ದೂ ಅಲ್ಲದೆ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ಧರ್ಮ ಉಳಿಯಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಧರ್ಮ ರಕ್ಷಣೆ ಮಾಡೋಣ ಇಡೀ ಹಿಂದೂ ಸಮಾಜಕ್ಕೆ ಅವಮಾನ ಇದನ್ನರಿತು ನಮ್ಮ ನಮ್ಮ ಮನೆಯಲ್ಲಿಯೇ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕಾಗಿರುವುದು ಅವಶ್ಯಕತೆಯಿದೆ ಹಾಗೆ ತಂದೆ ತಾಯಿಯರು ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ ಮೋಸದ ಮತಾಂತರ ಲವ್ ಜಿಹಾದ್ ತಡೆಯಲು ನೀವೆಲ್ಲ ಸಿದ್ದರಾಗಿ ಎಂದು ಮುಖ್ಯ ವಕ್ತಾರರಾಗಿ ವಿಶ್ವ ಹಿಂದೂ ಪರಿಷತ್ತಿನ ಕ್ಷೆತ್ರಿಯ ಧರ್ಮಾಚಾರಿ ಪ್ರಮುಖ ಬಸವರಾಜ ಜೀ ಕರೆ ನೀಡಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ವಿಶ್ವ ಹಿಂದೂ ಪರಿಷತ್ವತಿಯಿಂದ ಹಮ್ಮಿಕೊಂಡ ದೀಪ ಲಕ್ಷ್ಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಇವತ್ತು ಭಾರತ ದೇಶ ಜಗತ್ತಿನಲ್ಲಿಯೇ ಶಕ್ತಿಶಾಲಿ ದೇಶವಾಗಿ ಬೆಳೆಯುತ್ತಿದ್ದೂ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಉತ್ತರ ಪ್ರಾಂತ ಮಹಿಳಾ ಪ್ರಮುಖರಾದ ಮಯಕ್ಕಾ ಚೌದ್ರಿ ಮಾತನಾಡಿ, ನೀವೆಲ್ಲ ವಾರಕ್ಕೊಮ್ಮೆ ಮಾತೆಯಾರೆಲ್ಲ ಸೇರಿ ಕಡ್ಡಾಯವಾಗಿ ಸತ್ಸಂಗ ನಡೆಸಬೇಕು ಹಾಗೆ ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ನಿಂದ ಹೆಚ್ಚು ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು. ಸಾನಿಧ್ಯ ವಹಿಸಿದ ಬೋರಗಿಯ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಯಂಕಂಚಿಯ ಹಿರೇಮಠದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ತಾಯಂದಿರು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವದರಿಂದ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಪಾಚ್ಯತ್ಯ ಸಂಸ್ಕೃತಿಯನ್ನು ಬಹಿಷ್ಕರಿಸಿ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿ ಖ್ಯಾತ ವೈಧ್ಯೆ ಶಾರದಾ ನಾಡಗೌಡ ಮಾತನಾಡಿ, ಇವತ್ತು ನಮ್ಮೆಲ್ಲರ ಅಕ್ಕ ತಂಗಿಯರು ತಾಯಂದಿರು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವದರಿಂದ ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯುವುದು ಖಂಡಿತ. ವಿಶ್ವ ಹಿಂದೂ ಪರಿಷತ್ ವತಿಯಿಂದ ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಕಾರ್ಯಕ್ರಮದ ರೂವಾರಿ ಮತ್ತು ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಸಹ ಕಾರ್ಯದರ್ಶಿ ಶೇಖರಗೌಡ ಹರನಾಳ, ತಾಲೂಕ ಮಹಿಳಾ ಪ್ರಮುಖರಾದ ಭೋರಮ್ಮ ಕರ್ುರಮಠ, ವಿಭಾಗ ಪ್ರಮುಖರಾದ ಶ್ರೀಮಂತ ದುದ್ದಗಿ ಜಿಲ್ಲಾ ಅಧ್ಯಕ್ಷ ಸಿದ್ದು ಹೂಗಾರ, ತಾಲೂಕ ಅಧ್ಯಕ್ಷ ಶರಣಗೌಡ ಬಿರಾದಾರ, ಹನುಮಗೌಡ ಹಚ್ಯಾಳ, ಸುನೀತಾ ತೇಲಿ, ಅರುಣಾ ಹಿರೇಮಠ, ನೀಲಮ್ಮ, ಭೋರಮ್ಮ ಬಗಲಿ, ಮಾದೇವಿ ಹಡಪದ, ಸುಜಾತಾ ಸುರಗಿಹಳ್ಳಿ, ನಿಖಿಲ ಬಿರಾದಾರ, ಪ್ರಶಾಂತ ಬಗಲಿ, ಶಿವರಾಜ ಗುತ್ತರಗಿ, ಶ್ರೀಧರ ಭಜಂತ್ರಿ, ಮಹೇಶ ಉಪ್ಪಾರ, ಸಿದ್ದು ಯಂಕಂಚಿ, ಭಾಗಣ್ಣ ಹೂಗಾರ, ಭಾಗಿಯಾಗಿದ್ದರು.
ಈ ದೀಪ ಲಕ್ಷ್ಮಿ ಕಾರ್ಯಕ್ರಮದಲ್ಲಿ 500 ಕ್ಕಿಂತ ಹೆಚ್ಚು ಮಾತೆಯರು ಈ ಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿದ ಮಾಡಬಾಳದ ಸಂಗಮನಾಥ ಗುರುಗಳು ಎಲ್ಲಾ ಮಾತೆಯರಿಂದ ಪೂಜೆ ಮಾಡಿಸಿದರು. ಪ್ರಿಯಾಂಕಾ ಹಿರೇಮಠ, ಭಾಗ್ಯಾ ಬಗಲಿ ಸ್ವಾಗತಿಸಿ ನಿರೂಪಿಸಿದರು.