ರಾಷ್ಟ್ರೀಯ

ದೇಶದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

ದೇಶದಲ್ಲಿ  ಕೊರೋನ  ಸೋಂಕು  ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

ನವದೆಹಲಿ, ನವೆಂಬರ್ 24: ದೇಶದಲ್ಲಿ  ಕೊರೋನ  ಸೋಂಕು  ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ  24 ಗಂಟೆಗಳ ಅವಧಿಯಲ್ಲಿ  37ಸಾವಿರದ 975 ಮಂದಿಗೆ ಕೊರೋನ  ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

 

ಇದೇ   24 ಗಂಟೆಗಳಲ್ಲಿ 42ಸಾವಿರದ 314 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 480 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ  ಕೋರೋನ ಸೋಂಕು  ಪ್ರಕರಣಗಳ ಸಂಖ್ಯೆ 91,77,841ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ  ಈವರೆಗೂ 1,ಲಕ್ಷದ 34 ಸಾವಿರದ  ,218 ಮಂದಿ ಮೃತಪಟ್ಟಿದ್ದು,  86,ಲಕ್ಷದ 04,955  ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಇಲಾಖೆ ಹೇಳಿದೆ. 

ಸುದ್ದಿ ಓದಿ