ಸಿರುಗುಪ್ಪ

ಭಾಷಾ ಅಲ್ಪಸಂಖ್ಯಾತರಿಗೆ ಹಕ್ಕುಗಳ ಘೋಷಣೆ: ಅಬ್ದುಲ್ ನಬಿ

ಭಾಷಾ ಅಲ್ಪಸಂಖ್ಯಾತರಿಗೆ ಹಕ್ಕುಗಳ ಘೋಷಣೆ: ಅಬ್ದುಲ್ ನಬಿ

 ಸಿರುಗುಪ್ಪ: ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಪ್ರತಿ ವರ್ಷ ಡಿಸೆಂಬರ್ 18ರಂದು ಆಚರಿಸಲಾಗುತ್ತದೆ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಸಮಾಜ ಸುಧಾರಕ ಸಾಕ್ಷರತಾ ಹರಿಕಾರ ಅಬ್ದುಲ್ ನಬಿ ಅವರು ಹೇಳಿದರು. ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ಅವರು 31ನೇ ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ನೆನಪಿಸಿ ಮಾತನಾಡುತ್ತಾ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಭಾರತದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಉತ್ತಮ ತಿಳುವಳಿಕೆಯನ್ನು ತರಲು ಈ ದಿನವನ್ನು ಆಚರಿಸಲಾಗುತ್ತದೆ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಬಲಪಡಿಸಲು ವಿಶ್ವ ಸಂಸ್ಥೆಯು 1992ರ ಡಿಸೆಂಬರ್ 18ರಂದು ರಾಷ್ಟ್ರೀಯ ಅಥವಾ ಜನಾಂಗೀಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳ ಹಕ್ಕುಗಳ ಘೋಷಣೆಯನ್ನು ಘೋಷಿಸಿತು ಅಂದಿನಿಂದ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಅಲ್ಪಸಂಖ್ಯಾತ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಪ್ರತಿಯೊಂದು ರಾಜ್ಯವು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ನೀತಿ ನಿರೂಪಣೆ ಮಾಡಲು ಇದು ಒಂದು ಸುಸಂದರ್ಭ ಅಲ್ಪಸಂಖ್ಯಾತರ ಹಕ್ಕುಗಳ ದಿನದಂದು ವಿವಿಧ ವಿಚಾರ ಸಂಕಿರಣಗಳು ಪ್ರಚಾರಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಭಾರತದ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರು, ಸಿಕ್ಕರು, ಕ್ರಿಶ್ಚಿಯನ್ಸ್ ನರು , ಬೌದ್ಧರು , ಪಾರ್ಷಿಗಳು ಮತ್ತು ಜೈನರು ಸೇರಿದ್ದಾರೆ ಭಾರತದಲ್ಲಿ ಅಲ್ಪಸಂಖ್ಯಾತರು ಒಟ್ಟು ಜನಸಂಖ್ಯೆಯ ಸುಮಾರು 19% ರಷ್ಟಿದ್ದಾರೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಏನ್ ಸಿ ಎಂ ಅನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ 1992ರ ಅಡಿಯಲ್ಲಿ ಸ್ಥಾಪಿಸಲಾಗಿದೆ ವಿಶ್ವಸಂಸ್ಥೆಯು 1992ರ ಡಿಸೆಂಬರ್ 18ರಂದು ರಾಷ್ಟ್ರೀಯ ಅಥವಾ ಜನಾಂಗೀಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳ ಹಕ್ಕುಗಳ ಘೋಷಣೆಯನ್ನು ಮಾಡುವ ಮೂಲಕ ಧರ್ಮ ಭಾಷೆ ರಾಷ್ಟ್ರೀಯತೆ ಅಥವಾ ಜನಾಂಗೀಯತೆಯ ಆಧಾರದ ಮೇಲೆ ಜಗತ್ತಿನಾದ್ಯಂತ ಜನರ ನಡುವೆ ತಾರತಮ್ಯ ಮಾಡದೆ ಇರಲು ದೇಶಗಳನ್ನು ಉತ್ತೇಜಿಸಿತು . ಜಗತ್ತಿನ ಪ್ರತಿ ರಾಷ್ಟ್ರವು ತಮ್ಮಲ್ಲಿನ ಅಲ್ಪಸಂಖ್ಯಾತರ ರಾಷ್ಟ್ರೀಯ ಅಥವಾ ಜನಾಂಗೀಯ ಸಾಂಸ್ಕೃತಿಕ ಧಾರ್ಮಿಕ ಮತ್ತು ಭಾಷಾ ಅಸ್ಮಿತೆಯನ್ನು ರಕ್ಷಿಸತಕ್ಕದ್ದು ಮತ್ತು ಆ ಅಸ್ಮಿತೆಯನ್ನು ಉಪಯೋಗಿಸಲು ಪರಿಸ್ಥಿತಿಗಳ ನಿರ್ಮಾಣಕ್ಕೆ ಕಟಿ ಬದ್ಧರಾಗಬೇಕು . ಈ ಘೋಷಣೆಯು ಪ್ರಪಂಚದಾದ್ಯಂತ ಅಲ್ಪಸಂಖ್ಯಾತರ ಗುಂಪನ್ನು ರಕ್ಷಿಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು ಬಹು ಸಂಖ್ಯಾತ ಅಲ್ಪಸಂಖ್ಯಾತ ವಿಷಯಗಳ ಬಗ್ಗೆ ಆಗಾಗ್ಗೆ ಚರ್ಚೆ ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಇದು ಭಾರತದಲ್ಲಿ ಬಹಳ ಮುಖ್ಯವಾದ ದಿನವಾಗಿದೆ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಭಾರತದ ವಿವಿಧ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಉತ್ತಮ ತಿಳುವಳಿಕೆ ಯನ್ನು ತರುವಲ್ಲಿ ಆಯೋಗವು ಪ್ರಮುಖ ಪಾತ್ರ ವಹಿಸಿದೆ ಎಂದು ಅಬ್ದುಲ್ ನಬಿ ವಿವರಿಸಿದರು.

ಸುದ್ದಿ ಓದಿ