ಅಧಿಕಾರಿಗಳ ನಿರ್ಲಕ್ಷತನ ಖಂಡಿಸಿ ಅರೆಬೆತ್ತಲೆ ಧರಣಿ, ಮೆರವಣಿಗೆಗೆ ನಿರ್ಧಾರ: ಪಾಟೀಲ
ರಾಣೇಬೆನ್ನೂರು13:- ಭಾತರ ದೇಶದ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿ ವಿಶ್ವದಲ್ಲಿಯೇ ಖ್ಯಾತಿಗಳಿಸಿದ ಡಾ. ಬಿ.ಆರ್. ಅಂಬೇಡ್ಕರ್ರವರ ಏ.14ರ ಜಯಂತಿಯಂದೇ ಓಖಿಖ ಗೆ ಒತ್ತಾಯಿಸಿ ಸರಕಾರ ಮತ್ತು ಬ್ಯಾಂಕ್ ಹಿರಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷತನ ಖಂಡಿಸಿ ಮುಖ್ಯಮಂತ್ರಿ ಮತ್ತು ಕೃಷಿ ಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ರೈತರಿಗೆ ನ್ಯಾಯ ಸಿಗದಿರುವುದನ್ನು ಖಂಡಿಸಿ ಅಂಬೇಡ್ಕರ್ ಜಯಂತಿಯಂದೇ ಅರೆಬೆತ್ತಲೆ ಧರಣಿ ಸತ್ಯಾಗ್ರಹವನ್ನು ಹಮ್ಮಕೊಳ್ಳಗವುದೆಂದು ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ ಮತ್ತು ಈರಣ್ಣ ಹಲಗೇರಿ ಘೋಷನೆ ಮಾಡಿದರು.
ಅವರು ಇಂದು ಮಾಕನೂರ ಗ್ರಾಮದ ಯುನಿಯನ್ ಬ್ಯಾಂಕ್ ಮುಂದೆ ಓಖಿಖ ಯೋಜನೆಗೆ ಒತ್ತಾಯಿಸಿ ನಡೆದ 20 ದಿನಗಳ ಅಹೋರಾತ್ರಿ ರೈತರ ಧರಣಿ, ಸತ್ಯಾಗ್ರಹದ ಮುಂದುವರಿದ ಭಾಗವಾಗಿ ಬಾರಕೋಲ ಚಳುವಳಿಯ ನೇತೃತ್ವ ವಹಿಸಿ ಮಾತನಾಡಿದ ಅವರು ಸಂಸದ ಶಿವಕುಮಾರು ಉದಾಸಿಯವರಿಗೆ ಸಂಬಂಧಪಡುವು ಓಖಿಖ ಗೆ ಯೋಜನೆಯ ಬಗ್ಗೆ ರೈತರ ಸಮಸ್ಯೆಗಳ ಬಗ್ಗೆ ಇದು ವರೆಗೂ ಚಕಾರವೆತ್ತದ ಅವರ ನಿರ್ಲಕ್ಷತನ ಖಂಡಿಸಿದ ಅವರು ಸಂಸದರ ಪ್ರತಿಕೃತಿಯ ಶವಯಾತ್ರೆ ನಡೆಸಿ ಬಾರಕೋಲಿನಿಂದ ಅವರ ಭಾವಚಿತ್ರಕ್ಕೆ ಭಾರಿಸುವ ಮೂಲಕ ಅವರ ಶವಸಂಸ್ಕಾರವನ್ನು ಹಿಂದೂ ಸಂಪ್ರದಾಯದ ವಿಧಿವಿಧಾನದಂತೆ ಮೆರವಣಿಗೆ ಮೂಲಕ ನೆರವೇರಿಸಿದರು.
ಶವಯಾತ್ರೆಯ ಮುಂದೆ ಭಜನೆ ಮಾಡುತ್ತ ‘5’ ವರ್ಷಕ್ಕೊಮ್ಮೆ ಚುನಾವಣೆ ಬಂದಾಗ ಮುಖ
ತೋರಿಸುತಿದ್ದೆಲ್ಲೊ, ವಿದೇಶದಲ್ಲೇ ಕಾಲ ಕಳೆಯುತ್ತಿದ್ದೆಲ್ಲೊ, ನಿನ್ನಂಥ ಜವಾಬ್ದಾರಿ ಎಂ.ಪಿ. ನಮಗಿನ್ನಲ್ಲಿಂದಾ ಸಿಗ್ತಾನೋ, ಆ ದೇವ್ರ ನಿನ್ನ ಎಷ್ಟು ದೌಡ ಕರಕ್ಕೊಂಡು ಬಿಟ್ನಲ್ಲೊ ಕ್ಷೇತ್ರ ಸುತ್ಲಿಲ್ಲಾ, ಜನನ ನೋಡ್ಲಿಲ್ಲಾ ಆದ್ರೂ ನಿನ್ನ ‘3’ ಬಾರಿ ಆರಿ್ಸ ಕಳಿಸಿದ್ದೆಲ್ಲೊ ಇನ್ಮೆಲೆ ಯಾರನ್ನ ನಾವು ಎಂ.ಪಿ ಆಗಿ ಒಪ್ಪಿಗೆಬೇಕು ಓ ದೇವರ ನಿನಗೆ ಕರುಣೆ ಇಲ್ವೆನೋ ಅಂಥಾ ಹಾಡಿ ಹಾಡಿ ಅಳುತ್ತಿದ್ದ ದೃಶ್ಯ ಎಲ್ಲರ ಮನಃ ಕರಗುವಂತಿತ್ತು.
ಪ್ರತಿಭಟನೆಯಲ್ಲಿ ಬಾರಕೋಲ ಕಟೆಯುವ ಮೂಲಕ ಸರಕಾರ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷತನ ಖಂಡಿಸಿದರಲ್ಲದೆ ಈ ಬಾರಕೋಲಿನ ಚಾಟಿ ಏಟು ಮುಂದೆ ನಿಮಗೆ ಕಾದಿದೆ ಎಂಬ ಸಂದೇಶ ಸಾರಿದರು.
ಪ್ರತಿಭಟನೆಯಲ್ಲಿ ಅಶೋಕಗೌಡ ಗಂಗನಗೌಡ್ರ, ಹನುಮಂತಣ್ಣ ಜಂಬಳೂರು, ಬಸನಗೌಡ ಹುಲ್ಲತ್ತಿ, ಶಿವನಗೌಡ ಗಂಗನಗೌಡ್ರ, ನಿಂಗರಡ್ಡಿ ಅಂತ್ರವಳ್ಳಿ, ಗಾಳೆಮ್ಮ, ಶಿದ್ದಮ್ಮ ಭೀಮನಗೌಡ್ರ, ಸುರೇಶ ಮಲ್ಲಾಪುರ, ಹರಿಹರಗೌಡ ಪಾಟೀಲ, ಮಲಕಪ್ಪ ಬುರಡಿಕಟ್ಟಿ, ಯಲ್ಲಪ್ಪ ಓಲೇಕಾರ, ಬೀರ್ಪ ಜಟಿಂಗಿ, ಹನುಮರಡ್ಡಿ ದೊಡ್ಡಬಿದರಿ, ಬಸವನಾಯಕ ಸಣ್ಣಮನಿ, ಮುಂತಾದ ನೂರಾರು ರೈತರು ಭಾಗವಹಿಸಿದ್ದರು. ಸೂಕ್ತ ಪೊಲೀಸ್ ಬಂದೊಬಸ್ತ ಒದಗಿಸಲಾಗಿತ್ತು.