ರಾಷ್ಟ್ರೀಯ

ಖ್ಯಾತ ಇತಿಹಾಸಕಾರ ಆರ್.ಎಲ್ ಶುಕ್ಲಾ ನಿಧನ

ಖ್ಯಾತ ಇತಿಹಾಸಕಾರ ಆರ್.ಎಲ್ ಶುಕ್ಲಾ ನಿಧನ

ನವದೆಹಲಿ, ಅ 17: ಪ್ರಖ್ಯಾತ ಇತಿಹಾಸಕಾರ ರಾಮ್ ಲಖನ್ ಶುಕ್ಲಾ ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಶುಕ್ಲಾ ಅವರು ಪತ್ನಿ ಹಾಗೂ ಮಧ್ಯಪ್ರದೇಶದ ಹಿರಿಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿರುವ ಪುತ್ರ ಪಂಕಜ್ ರಾಗ್ ಅವರನ್ನು ಅಗಲಿದ್ದಾರೆ. ಆರ್. ಎಲ್ ಶುಕ್ಲಾ ಅವರ ಸಹೋದರ ಪ್ರಭಾತ್ ಶುಕ್ಲಾ ಸಹ ಪ್ರಸಿದ್ಧ ಇತಿಹಾಸಕಾರ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯ ಪನಾಪುರ ಗ್ರಾಮದಲ್ಲಿ 1938 ರ ಜನವರಿ 18 ರಂದು ಜನಿಸಿದ ರಾಮ್ ಲಖನ್ ಶುಕ್ಲಾ ಅವರು ಪಾಟ್ನಾ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಮತ್ತು ಪಿಎಚ್‌ಡಿ ಮಾಡಿದರು. ಆಧುನಿಕ ಭಾರತದ ಉನ್ನತ ಇತಿಹಾಸಕಾರರಲ್ಲಿ ಅವರು ಪ್ರಮುಖರಾಗಿದ್ದಾರೆ.  ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ 1974 ರಲ್ಲಿ ಶುಕ್ಲಾ ಅವರನ್ನು ನೇಮಿಸಲಾಯಿತು ಮತ್ತು ಅವರು ನಿವೃತ್ತಿಯ ನಂತರ ಬರವಣಿಗೆಯ ಕೆಲಸವನ್ನು ಮುಂದುವರಿಸುತ್ತಿದ್ದರು.  

  

ಸುದ್ದಿ ಓದಿ