ರಾಷ್ಟ್ರೀಯ

ಕೋವಿಡ್ 19 : ಎಂಜಿಆರ್ ಸೋದರನ ಪುತ್ರ ಸಾವು

ಕೋವಿಡ್ 19 : ಎಂಜಿಆರ್ ಸೋದರನ ಪುತ್ರ ಸಾವು

ಚೆನ್ನೈ, ಸೆಪ್ಟೆಂಬರ್. 11: ದಿವಂಗತ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಸ್ಥಾಪಕ ಮತ್ತು ಭಾರತ ರತ್ನ ಎಂ ಜಿ ರಾಮಚಂದ್ರನ್ ಹಿರಿಯ ಸಹೋದರ ಎಂ ಜಿ ಚಕ್ರಪಾಣಿ ಅವರ   ಮಗ ಎಂ ಸಿ ಚಂದ್ರನ್ ನಿಧನರಾಗಿದ್ದಾರೆ. 

ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಅವರಿಗೆ 75 ವರ್ಷ ವಯಸ್ಸಾಗಿತ್ತು.  ಸೋಂಕು ಪತ್ತೆಯ ನಂತರ ಚಂದ್ರನ್

ಆಸ್ಪತ್ರೆಯಲ್ಲಿ   ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ   ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

ಚಂದ್ರನ್ ನಿಧನಕ್ಕೆ ಎಐಎಡಿಎಂಕೆ ಸಂಯೋಜಕ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮತ್ತು ಜಂಟಿ ಸಂಯೋಜಕ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ   ಕೆ ಪಳನಿಸ್ವಾಮಿ ಜಂಟಿ ಸಂದೇಶದಲ್ಲಿ ಸಂತಾಪ ಸೂಚಿಸಿದ್ದಾರೆ

ಸುದ್ದಿ ಓದಿ