ಗುರುಶಾಂತಪ್ಪಗೌಡ ಹೊಟ್ಟಿಗೌಡ್ರ ನಿಧನ
ರಾಣಿಬೆನ್ನೂರ 06: ತಾಲೂಕಿನ ಜೋಯಿಸರಹಳಹಳ್ಳಿ ಗ್ರಾಮದ ನಿವಾಸಿ, ತಾಲೂಕ ವೀರಶೈವ ಸಮಾಜ ಮಾಜಿ ಉಪಾಧ್ಯಕ್ಷ, ಸಿದ್ದೇಶ್ವರ ಗ್ರಾಮಾಂತರ ಪ್ರೌಢ ಶಾಲೆ ಹಾಗೂ ಹೊಸ ಮನೆ ಸಿದ್ದಪ್ಪ ಪದವಿಪೂರ್ವ ಮಹಾವಿದ್ಯಾಲಯದ ಸ್ಥಳೀಯ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಗುರುಶಾಂತಪ್ಪಗೌಡ ಹನುಮಂತಗೌಡ ಹೊಟ್ಟಿಗೌಡ್ರ (80) ಇವರು ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.