ಶಿಗ್ಗಾವ್

ಕಾರ್ಮಿಕ ಸಾವು: ಪರಿಹಾರ ನೀಡುವಂತೆ ಆಗ್ರಹ

ಕಾರ್ಮಿಕ ಸಾವು: ಪರಿಹಾರ ನೀಡುವಂತೆ ಆಗ್ರಹ

ಶಿಗ್ಗಾವಿ :ತಾಲೂಕಿನ ಕೋಣನಕೇರಿ ಗ್ರಾಮ ಪಂಚಾಯತಿಯ ವ್ಯಕ್ತಿಗೆ ಬರುವ ಶಿವರಾಮ ಹೆಬ್ಬಾರ ಶುಗರ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ದುಂಡಸಿ ಯುವಕ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಆತನಿಗೆ ಶುಗರ್ ಫ್ಯಾಕ್ಟರಿಯಿಂದ 50 ಲಕ್ಷ ಹಣಕಾಸಿನ ನೆರವು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ  ತಾಲೂಕ ಅಧ್ಯಕ್ಷ ಮುತ್ತಣ್ಣ ಗುಡಿಗೇರಿ ಆಗ್ರಹಿಸಿದ್ದಾರೆ. 

ಶುಗರ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿ ಇದ್ದರೂ ಆತನಿಗೆ ಫ್ಯಾಕ್ಟರಿಯಲ್ಲಿ ಅನಾಹುತ ಆದರೆ ಕೈ ಅಥವಾ ಕಾಲು ಕಳೆದುಕೊಂಡರೆ ಆ ಫ್ಯಾಕ್ಟರಿಯಲ್ಲಿ ದುಡಿಯುವಂತ ಕಾರ್ಮಿಕರಿಗೆ 25 ಲಕ್ಷ ಪರಿಹಾರ ಧನ ಘೋಷಣೆ ಮಾಡಬೇಕು  ಮೃತಪಟ್ಟರೆ 50 ಲಕ್ಷ ಘೋಷಣೆ ಮಾಡಬೇಕು ಮತ್ತು ಎಲ್ಲಾ ಕಾರ್ಮಿಕರಿಗೂ ಪಿಂಚಣಿ ಆಧಾರಿತವಾಗಿ ಬರುವಂತ ಅವರ ಸಂಭಾವನೆ ಮತ್ತು ಪ್ರತಿಯೊಬ್ಬ ಕಾರ್ಮಿಕನಿಗೂ ಇಎಸ್‌ಐ, ಪಿಎಫ್, ಜೀವ ವಿಮೆ, ಆರೋಗ್ಯ ವಿಮೆ, ಕುಟುಂಬ ವಿಮೆ ಮಾಡಿಕೊಡಬೇಕು ಎಂದು ಪ್ಯಾಕ್ಟರಿಯ ಮಾಲಕರು ಹಾಗೂ ವ್ಯವಸ್ಥಾಪಕರಿಗೆ  ಕೋರಿದರು. 


ಸುದ್ದಿ ಓದಿ