ದೇವರ ದಾಸಿಮಯ್ಯ ಜಯಂತಿ ಆಚರಣೆ
ಹೊಸಪೇಟೆ (ವಿಜಯನಗರ) 17: ಹೊಸಪೇಟೆ ತಾಲೂಕು ಕಚೇರಿ ವತಿಯಿಂದ ದೇವರ ದಾಸಿಮಯ್ಯ ಅವರ ಜಯಂತಿಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಚರಿಸಲಾಯಿತು.ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ತಹಶೀಲ್ದಾರ ಹೆಚ್. ವಿಶ್ವನಾಥ್ ಅವರು ಪುಷ್ಪ ನಮನ ಸಲ್ಲಿಸಿ ಸಮಾಜದ ಮುಖಂಡರರಿಗೆ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರ ರಮೇಶ, ಶ್ರೀಧರ್, ಮಂಜುನಾಥ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ಮತ್ತು ಅಗ್ನಿಶಾಮಕ ಠಾಣಾಧಿಕಾರಿಯಾದ ಕೆ.ಎಮ್.ಕೃಷ್ಣ ಸಿಂಗ್, ಸಮಾಜದ ಮುಖಂಡ ಬೊಡಾ ರಾಮಣ್ಣ, ಬುದ್ದಿ ರಾಮಕೃಷ್ಣ, ವಾಸುದೇವ, ಬಸವರಾಜ ಹಾಗೂ ನಿವೃತ ಕನ್ನಡ ಶಿಕ್ಷಕರ ಸೋಮಣ್ಣ ಮತ್ತು ಇತರರು ಜಯಂತಿಯಲ್ಲಿ ಭಾಗವಹಿಸಿದ್ದರು.