ಚಿಕ್ಕೋಡಿ

ಬಿ. ಸಿ. ಗಂಗಾಲ ಪ್ರಶಸ್ತಿಗೆ ದರಗಾದ ಆಯ್ಕೆ

ಬಿ. ಸಿ. ಗಂಗಾಲ ಪ್ರಶಸ್ತಿಗೆ ದರಗಾದ ಆಯ್ಕೆ

ಚಿಕ್ಕೋಡಿ 04: ಇಲ್ಲಿನ ಸಿಎಲ್‍ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಬಳಗದ ಪ್ರಸಕ್ತ ಸಾಲಿನ ಶ್ರೀ ಬಿ. ಸಿ. ಗಂಗಾಲ ಶಿಕ್ಷಕ ಪ್ರಶಸ್ತಿಗೆ ಬಾಣಂತಿಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸಹಶಿಕ್ಷಕ  ಎಚ್. ಡಿ. ದರಗಾದ ಆಯ್ಕೆಯಾಗಿದ್ದಾರೆ.

ಸಿಎಲ್‍ಇ ಸಂಸ್ಥೆಯ ಬಿ. ಸಿ. ಗಂಗಾಲ ಶಿಕ್ಷಣ ಮಹಾವಿದ್ಯಾಲಯ ಚಿಕ್ಕೋಡಿಯಲ್ಲಿ ಸಪ್ಟೆಂಬರ್ 05ರಂದು ಮಂಜಾನೆ 10:30 ಗಂಟೆಗೆ ಶಿಕ್ಷಕರ ದಿನಾಚರಣೆ ಹಾಗೂ ಬಿ. ಸಿ. ಗಂಗಾಲ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್. ಡಿ. ದರಗಾದ ಅವರಿಗೆ ಈ ಪ್ರಶಸ್ತಿ ಯನ್ನು ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಪ್ರೋ. ಎಮ್. ಕೃಷ್ಣೇಗೌಡ ಆಗಮಿಸುವರು. ಅಲ್ಲಮಪ್ರಭು ಮಹಾಸ್ವಾಮಿಗಳು ಚಿಂಚಣಿ ಸಾನಿದ್ಯವನ್ನು ವಹಿಸುವರು. ಸಂಪಾದನ ಮಹಾಸ್ವಾಮಿಗಳು ಸಂಪಾದನ ಚರಮೂರ್ತಿಮಠ ಚಿಕ್ಕೋಡಿ ಸಮ್ಮುಖ ವಹಿಸುವರು ಎಂದು ಹಳೆಯ ವಿದ್ಯಾರ್ಥಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ ಹಾಗೂ ಬಳಗದ ಕಾರ್ಯಕ್ರಮ ಅಧ್ಯಕ್ಷ ಸಂಜೀವ ಮಧಾಳೆ ಹಾಗೂ ಕಾರ್ಯದರ್ಶಿ ವಿರುಪಾಕ್ಷಿ ಕವಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ