ರಾಷ್ಟ್ರೀಯ

ರಜೌರಿ ಜಿಲ್ಲೆಯಲ್ಲಿ ನಿಗೂಢ ಸ್ಫೋಟ: ಹಲವು ವಾಹನಗಳಿಗೆ ಹಾನಿ

ರಜೌರಿ ಜಿಲ್ಲೆಯಲ್ಲಿ ನಿಗೂಢ ಸ್ಫೋಟ: ಹಲವು ವಾಹನಗಳಿಗೆ ಹಾನಿ

ಜಮ್ಮು, ಸೆಪ್ಟೆಂಬರ್ 6: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿ ಈ ಪ್ರದೇಶದಲ್ಲಿದ್ದ ಅನೇಕ ವಾಹನಗಳು ಹಾನಿಗೊಂಡ ಹಿನ್ನೆಲೆಯಲ್ಲಿ ಗಡಿ ಪಟ್ಟಣದಲ್ಲಿ ಆತಂಕ ಉಂಟಾಗಿತ್ತು.   

ರಜೌರಿ ಜಿಲ್ಲೆಯ ಮೈರಾ ಚೌಕಿಯಾನ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಿಗೂಢ ಸ್ಫೋಟ ಸಂಭವಿಸಿದೆ, ಈ ಕುರಿತಂತೆ ಪೊಲೀಸ್ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ರಜೌರಿಯ ಮೈರಾ ಚೌಕಿಯಾನ್ ಗ್ರಾಮದ ಕೆಲ ಮನೆಗಳ ಬಳಿ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಮಧ್ಯಮ ತೀವ್ರತೆಯ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

"ಸ್ಫೋಟದಿಂದ ಕೆಲ ಕಾರುಗಳು ಹಾನಿಗೊಂಡಿವೆ. ಸ್ಫೋಟಕ ವಸ್ತುಗಳನ್ನು ಎಸೆದು ಈ ಕೃತ್ಯ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ. 

‘ಇದು ನಿಗೂಢ ಸ್ಫೋಟವಾಗಿದ್ದು, ಈ ಕುರಿತುಂತೆ ತನಿಖೆ ನಡೆಸುತ್ತಿದ್ದೇವೆ" ಎಂದು ಎಸ್ಎಸ್ಪಿ ರಾಜೌರಿ ಚಂದನ್ ಕೊಹ್ಲಿ ಯುಎನ್ಐಗೆ ತಿಳಿಸಿದ್ದಾರೆ.   


ಸುದ್ದಿ ಓದಿ