ನೂತನ ಉಪವಿಭಾಗಾಧಿಕಾರಿಗೆ ದಲಿತ ಸಮಾಜ ವತಿಯಿಂದ ಸನ್ಮಾನ
ಶಿಗ್ಗಾವಿ 08: ಶಿಗ್ಗಾವಿ ಹಾಗೂ ಸವಣೂರ ಮತ್ತು ಹಾನಗಲ್ ಈ ಮೂರು ತಾಲೂಕುಗಳ ವ್ಯಾಪ್ತಿಗೆ ಒಳಪಟ್ಟಂತೆ ಉಪ ವಿಭಾಗಾಧಿಕಾರಿಗಳಾಗಿ ನೂತನವಾಗಿ ಆಗಮಿಸಿ ಕಾರ್ಯ ನಿರ್ವಹಿಸುತ್ತಿರುವ ಮಹಮ್ಮದ್ ಖಿಜರ್ ಅವರಿಗೆ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಮಾಜದ ಹಿರಿಯರಾದ ಕರಿಯಪ್ಪ ಕಟ್ಟಿಮನಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಹಾಗೂ ವಕೀಲ ಡಾ.ಮಲ್ಲೇಶಪ್ಪ ಹರಿಜನ, ಡಿ.ಎಸ್.ಎಸ್ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕ ಅಧ್ಯಕ್ಷ ಹನಮಂತಪ್ಪ. ಹರಿಜನ, ತಾಲೂಕ ಬಿಜೆಪಿ ಎಸ್ಸಿ ಮೋರ್ಚಾ ಸಹ ಕಾರ್ಯದರ್ಶಿ ಸುರೇಶ ಮೂಡೆಣ್ಣವರ, ಕರೆಪ್ಪ ಮಾದರ, ಪರಸುರಾಮ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.