ಕುಷ್ಟಗಿ

ವಿವಿಧೆಡೆ ಲೇಓಟ್‌ಗಳ ಡಿಯುಇಸಿ ತಹಸಿಲ್ದಾರ್ ರಾಜು ಫಿರಂಗಿ ವೀಕ್ಷಣೆ

ವಿವಿಧೆಡೆ ಲೇಓಟ್‌ಗಳ ಡಿಯುಇಸಿ ತಹಸಿಲ್ದಾರ್ ರಾಜು ಫಿರಂಗಿ ವೀಕ್ಷಣೆ

ಕುಷ್ಟಗಿ 15:  ಪಟ್ಟಣದ ವಿವಿಧೆಡೆ ನಿರ್ಮಿಸಿದ ಲೇಓಟ್‌ಗಳನ್ನು ಮಂಗಳವಾರ ಬೆಳಗ್ಗೆ ಕೊಪ್ಪಳ ನಗರಾಭಿವೃದ್ಧಿ ಕೋಶದ ತಹಸೀಲ್ದಾರ್ ರಾಜು ಫಿರಂಗಿ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿದರು.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕುಷ್ಟಗಿ ಪಟ್ಟಣದ ಲೇಓಟ್‌ಗಳನ್ನು ವೀಕ್ಷಣೆ ಮಾಡಲಾಗಿದೆ.  

ಶಶಿಧರ ಕವಲಿ ಸರ್ವೇ ನಂಬರ್ 182/2/1 5:35 ಗುಂಟೆ 2014ನೇ ಸಾಲಿನಲ್ಲಿ ಲೇಓಟ್ ಮಾಡಲಾಗಿದೆ. ಈ ಲೇಓಟ್‌ನಲ್ಲಿ ರಸ್ತೆ, ಚರಂಡಿ, ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಮೂಲಭೂತಸೌಲಭ್ಯ ಕಲ್ಪಿಸಿಲ್ಲ. ಕೃಷ್ಣಮೂರ್ತಿ 58/1 4:29 ಗುಂಟೆ ಈ ಲೇಓಟ್ ನಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಮೂಲ ಭೂತಸೌಲಭ್ಯ ಕಲ್ಪಿಸಿಲ್ಲ. 2013 ನೇ ಸಾಲಿನಲ್ಲಿ ಎನ್‌.ಎ ಆಗಿದೆ ಈ ಲೇಓಟ್ ನಲ್ಲಿ ಕೆಲವು ಮನೆಗಳು ನಿರ್ಮಾಣವಾಗಿವೆ. ಮದ್ದಾನೆಯ ಹಿರೇಮಠ 3:10 ಗುಂಟೆ ಈ ಲೇಓಟ್ ನಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯವನ್ನು  ಮಾಡಲಾಗಿದೆ. ಯಮನಪ್ಪ ಚೋರಿ 118/4 2:10 ಗುಂಟೆ ರಸ್ತೆ, ಚರಂಡಿ, ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಮೂಲ ಭೂತಸೌಲಭ್ಯ ಕಲ್ಪಿಸಿಲ್ಲ ಈ ಮೇಲಿನ ಎಲ್ಲಾ ಲೇಓಟ್ ಗಳನ್ನು ವೀಕ್ಷಣೆ ಮಾಡಿ ಪರೀಶೀಲಿಸಿ ಮಾಹಿತಿಯನ್ನು ಸಂಗ್ರಹಿಸಿ ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ವೆಂಕಣ್ಣ, ನೋಡಲ್ ಅಧಿಕಾರಿ ರಾಘವೇಂದ್ರ, ಪ್ರಥಮ ದರ್ಜೆ ಸಹಾಯಕ ಎಸ್ ಸಿ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಚಿರಂಜೀವಿ ಉಪಸ್ಥಿತರಿದ್ದರು. 


ಸುದ್ದಿ ಓದಿ