ರಾಷ್ಟ್ರೀಯ

ಡಿ.ಆರ್.ಡಿ.ಓ 63 ನೇ ಸಂಸ್ಥಾಪನಾ ದಿನ: ರಕ್ಷಣಾ ಕ್ಷೇತ್ರದ ಸಾಧನೆಗಳ ಬಗ್ಗೆ ಹೆಮ್ಮೆ ಇದೆ: ರಾಜನಾಥ್ ಸಿಂಗ್

ಡಿ.ಆರ್.ಡಿ.ಓ 63 ನೇ ಸಂಸ್ಥಾಪನಾ ದಿನ: ರಕ್ಷಣಾ ಕ್ಷೇತ್ರದ ಸಾಧನೆಗಳ ಬಗ್ಗೆ ಹೆಮ್ಮೆ ಇದೆ: ರಾಜನಾಥ್ ಸಿಂಗ್

ನವದೆಹಲಿ, ಜ 1: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ - ಡಿಆರ್ ಡಿಒ ನ  63ನೇ ಸಂಸ್ಥಾಪನ  ದಿನವನ್ನು ಆಚರಿಸಲಾಯಿತು. ದೇಶದ  ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಾಗಿರುವ ಪರಿಕರಗಳನ್ನು ಸಂಶೋಧಿಸಿ,  ಅಭಿವೃದ್ಧಿ ಪಡಿಸುವ ದೇಶದ ಹೆಮ್ಮೆಯ ಸಂಸ್ಥೆ ಆರು ದಶಕಗಳ ಹಿಂದೆ ಜನ್ಮ ತಳೆದಿದ್ದು, ಇದೀಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ  ಡಿಆರ್ ಡಿಒ ಸಿಬ್ಬಂದಿಗೆ ಹಾಗೂ ಅವರ ಕುಟುಂಬ  ವರ್ಗದವರಿಗೆ   ರಕ್ಷಣಾ ಸಚಿವ ರಾಜನಾಥ್ ಸಿಂಗ್  ಶುಭ ಕೋರಿದ್ದಾರೆ. ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು  ಡಿಆರ್ ಡಿಒ  ಅಸಾಧಾರಣಾ  ತಾಂತ್ರಿಕ ಪ್ರಗತಿ ಮತ್ತು   ಸಾಧನೆಗಳ ಬಗ್ಗೆ ದೇಶ ಹೆಮ್ಮೆ ಪಡುತ್ತದೆ.  ಹೊಸ ವರ್ಷದಲ್ಲಿ  ಇನ್ನೂ ಅನೇಕ ಯಶಸ್ಸುಗಳು ದೊರೆಯಂತಾಗಲಿ ಎಂದು  ಟ್ವೀಟ್ ಮೂಲಕ ತಿಳಿಸಿದ್ದಾರೆ.

  


ಸುದ್ದಿ ಓದಿ