ರೈತರ ಪ್ರತಿಭಟನೆಗೆ ಡಿಎಂಕೆ ಬೆಂಬಲ
ಪುದುಚೇರಿ, ಡಿಸೆಂಬರ್ 05: ಕೇಂದ್ರ ಸರ್ಕಾರ ಜಾರಿಗೊಳಿಸಿರುವ
ಕೃಷಿ ಕಾನೂನು ವಿರೋಧಿಸಿ ದೆಹಲಿ ಗಡಿ ಹಾಗೂ ದೇಶದ ಇನ್ನಿತರೆಡೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ
ಡಿಎಂಕೆ ಬೆಂಬಲ ನೀಡಿದೆ.
ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಲು ದ್ರಾವಿಡ ಮುನ್ನೇಟಾ ಕಳಗಂ ಡಿಎಂಕೆ ಶನಿವಾರ ಪುದುಚೇರಿಯ ಮುಖ್ಯ ಅಂಚೆ ಕಚೇರಿಯ ಮುಂದೆ ಕಪ್ಪು ಧ್ವಜಗಳನ್ನು ಹಿಡಿದು, ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಡಿಎಂಕೆ ಪಕ್ಷದ ಹಲವು ನಾಯಕರು, ಸಿಪಿಐ ಸ್ವಯಂಸೇವಕರು ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಂಬಾನಿ ಮತ್ತು ಗೌತಮ್ ಅದಾನಿಯವರ ಪ್ರತಿಕೃತಿಗಳನ್ನು ದಹಿಸಲಾಯಿತು.
ಇದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದಕ್ಕೆ ಮುಂದಾದರು. ಆದಾಗ್ಯೂ, ಭಾಗಶಃ ಸುಟ್ಟುಹೋದ ಪ್ರತಿಕೃತಿಗಳನ್ನು ಪೊಲೀಸರು ಅವರಿಂದ ಕಿತ್ತುಕೊಂಡರು.